ಪೇರಾಲು- ಅಂಬ್ರೋಟಿ ವಿಜೃಂಭಣೆಯ ಗಣೇಶೋತ್ಸವ

0

 

ಮಂಡೆಕೋಲು ಗ್ರಾಮದ ಪೇರಾಲು- ಅಂಬ್ರೋಟಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ರಾಮ ಭಜನಾ ಮಂದಿರ, ಹಾಗೂ ಯುವಕ ಮಂಡಲ ಇವರ ಸಂಯುಕ್ತ ಆಶ್ರಯದಲ್ಲಿ ಆ. 31ರಂದು 15ನೇ ವರ್ಷದ ಗಣೇಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಬೆಳಿಗ್ಗೆ ಗಣಪತಿ ಹವನದ ಬಳಿಕ ಗಣಪತಿ ದೇವರ ಪ್ರತಿಷ್ಟೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಶೃಂಗೇರಿಯ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘದ ವತಿಯಿಂದ ವಿಶೇಷ ಭಕ್ತಿ ಗೀತೆಗಳ ಗಾಯನ ಜರಗಿತು. ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಭಜನೆ ಕಾರ್ಯಕ್ರಮದ ಬಳಿಕ ವೈಭವದ ಶೋಭಾಯಾತ್ರೆ ನಡೆದು ಪಯಸ್ವಿನಿ ನದಿಯಲ್ಲಿ ಗಣಪತಿ ವಿಗ್ರಹದ ಜಲಸ್ಥಂಬನ ಮಾಡಲಾಯಿತು.