ಸೆ.5:ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುಗಳೆಡೆಗೆ ನಮ್ಮ ನಡೆ ಕಾರ್ಯಕ್ರಮ

0

 

 

ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಚಂದ್ರ ಗೌಡರಿಗೆ ಗೌರವ

ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ಸುಳ್ಯದ ಕೆಲವು ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ‘ಗುರುಗಳೆಡೆ ನಮ್ಮ ನಡೆ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು ಆ ಪ್ರಯುಕ್ತ ವಿಶ್ರಾಂತ ಪ್ರಾಂಶುಪಾಲ, ಆರ್ಥಿಕ ತಜ್ಞ, ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡರ ಮನೆಗೆ ಸಂಜೆ 5ಗಂಟೆಗೆ ತೆರಳಿ ಅವರನ್ನು ಗೌರವಿಸಲಾಗುವುದು ಎಂದು ಕಾರ್ಯಕ್ರಮ ಸಂಚಾಲಕರುಗಳಾದ ಚಂದ್ರಶೇಖರ್ ಪೇರಾಲು ಹಾಗೂ ದಿನೇಶ್ ಮಡಪ್ಪಾಡಿಯವರು ತಿಳಿಸಿದ್ದಾರೆ