ಜಾಲ್ಸೂರು: ಸಾರ್ವಜನಿಕ ಗಣೇಶೋತ್ಸವ ಶೋಭಾಯಾತ್ರೆಗೆ ಸಾಥ್ ನೀಡಿದ ವಿ.ಹಿಂ.ಪ. – ಭಜರಂಗದಳ

0

 

ವಿ.ಹಿಂ. ಪ. – ಭಜರಂಗದಳ ಅಡ್ಕಾರು ಸ್ಕಂದಶಾಖೆ ವತಿಯಿಂದ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಟ್ಯಾಬ್ಲೋ


ಜಾಲ್ಸೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ವತಿಯಿಂದ 35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಆ.31ರಂದು ಜರುಗಿದ್ದು, ಅಪರಾಹ್ನ ನಡೆದ ವಿಘ್ನನಿವಾರಕನ ವೈಭವದ ಶೋಭಾಯಾತ್ರೆಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಅವರ ಟ್ಯಾಬ್ಲೋ ರಚಿಸುವ ಮೂಲಕ ಶೋಭಾಯಾತ್ರೆಗೆ ಸಾಥ್ ನೀಡಿದರು.

ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ತೆರೆದ ಜೀಪಿನಲ್ಲಿ ಭಾರತ ಮಾತೆಯ ಭಾವಚಿತ್ರ ಹಾಗೂ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಇಟ್ಟು ಮೆರವಣಿಗೆಯಲ್ಲಿ ಸಾಗಿ ಬಂದರು.


ಶೋಭಾಯಾತ್ರೆಯಲ್ಲಿ ಅಡ್ಕಾರು ಸ್ಕಂದ ಶಾಖೆಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಅನೇಕ ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.