ನಾಗಪಟ್ಟಣ ಸದಾಶಿವ ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಬಲಿವಾಡು ಕೂಟ

0

 

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಬಲಿವಾಡು ಕೂಟವು ಜರುಗಿತು. ಬೆಳಗ್ಗೆ ಶ್ರೀ ದೇವರಿಗೆ ಅರ್ಚಕ ಶಿವಪ್ರಸಾದ್ ಭಟ್ ರವರ ನೇತೃತ್ವದಲ್ಲಿ ನಿತ್ಯ ಪಾಜೆಯಾಗಿ ವಿಶೇಷವಾಗಿ ಶನಿವಾರ ಪೂಜೆಯು ಸೇವಾರೂಪದಲ್ಲಿ ನಡೆಯಿತು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ದೇವಸ್ಥಾನದ ವ್ಯ.ಸ.ಅಧ್ಯಕ್ಷ ದಿನೇಶ್ ಕೋಲ್ಚಾರು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.ಶ್ರಾವಣ ಮಾಸದ ಮುಂದಿನ ಎರಡು ಶನಿವಾರದಂದು ಬಲಿವಾಡು ವೃತಾಚರಣೆಯು ನಡೆಯಲಿರುವುದು.