ಪಂಜ :ಶ್ರೀ ಶಾರದೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

0

 

ಅಧ್ಯಕ್ಷ-ಲೋಕೇಶ್ ಬರೆಮೇಲು, ಕಾರ್ಯದರ್ಶಿ-ಕುಸುಮಾಧರ ಕೆಮ್ಮೂರು, ಕೋಶಾಧ್ಯಕ್ಷ-ಕೋಶಾಧಿಕಾರಿ ನಾರಾಯಣ ಶಿರಾಜೆ

ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಇದರ ವತಿಯಿಂದ ಶ್ರೀ ಶಾರದೋತ್ಸವ ಸಮಿತಿ- 2022 ಪದಾಧಿಕಾರಿಗಳ ಆಯ್ಕೆ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಿತು.

 

ನೂತನಅಧ್ಯಕ್ಷರಾಗಿ ಲೋಕೇಶ್ ಬರೆಮೇಲು, ಕಾರ್ಯದರ್ಶಿಯಾಗಿ ಕುಸುಮಾಧರ ಕೆಮ್ಮೂರು, ಉಪಾಧ್ಯಕ್ಷರಾಗಿ ಲಿಖಿತ್ ಪಲ್ಲೋಡಿ,  ಕೋಶಾಧಿಕಾರಿ ನಾರಾಯಣ ಶಿರಾಜೆ, ಉಪಕಾರ್ಯದರ್ಶಿಯಾಗಿ ಲಕ್ಷ್ಮಣ ಗೌಡ ಬೇರ್ಯ, ಕಾರ್ಯಕ್ರಮದ ಸಮನ್ವಯ ಸಂಚಾಲಕರಾಗಿ ಗುರುಪ್ರಸಾದ್ ತೋಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರ ಸಭಾಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಶ್ರೀ ಶಾರದೋತ್ಸವ ಸಮಿತಿಯ ನೂತನ ಅಧ್ಯಕ್ಷ ಲೋಕೇಶ್ ಬರೆಮೇಲು, ನಿಕಟಪೂರ್ವ ಅಧ್ಯಕ್ಷ ಶಶಿಧರ ಪಳಂಗಾಯ, ಕಾರ್ಯದರ್ಶಿ ನಾಗಮಣಿ ಕೆದಿಲ, ಭಜನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಜಾಕೆ,ಮಕ್ಕಳ ತರಬೇತಿಯ ಅಧ್ಯಕ್ಷ ಕುಸುಮಾಧರ ಕೆಮ್ಮೂರು,ಭಜನಾ ಮಂಡಳಿ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ತೋಟ, ಉಪಕಾರ್ಯದರ್ಶಿ ರಾಜ್ ಕುಮಾರ್ ಬೇರ್ಯ, ಆಂತರಿಕ ಲೆಕ್ಕ ಪರಿಶೋಧಕ ಬಾಲಕೃಷ್ಣ ಗೌಡ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.