ತಾಲೂಕು ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ಗ್ರೀನ್ ವ್ಯೂ ಅಂಗ್ಲ ಮಾಧ್ಯಮ ಶಾಲೆಗೆ ಅವಳಿ ಪ್ರಶಸ್ತಿ

0

 

ಪ್ರಾಥಮಿಕ ಮತ್ತು ಪ್ರೌಢ ವಿಭಾಗ ಎರಡು ವಿಭಾಗದಲ್ಲಿ ವಿನ್ನರ್

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೆ.ಪಿ.ಎಸ್ ಗಾಂಧಿ ನಗರ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪುಟ್ಬಾಲ್ ಪಂದ್ಯಾಟ ಆಗಸ್ಟ್ 29 ರಂದು ಗಾಂಧಿನಗರ ಕೆ ಪಿ ಎಸ್ ಕ್ರೀಡಾಂಗಣದಲ್ಲಿ ನಡೆಯಿತು.
ಪ್ರಾಥಮಿಕ ಶಾಲಾ ಮಟ್ಟದ ಫುಟ್ ಬಾಲ್ ಪಂದ್ಯಾಟದಲ್ಲಿ ಗ್ರೀನ್ ವ್ಯೂ ಅಂಗ್ಲ ಮಾದ್ಯಮ ಶಾಲೆ ಸುಳ್ಯ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಅರ್ಹತೆ ಪಡೆದು ಕೊಂಡಿರುತ್ತಾರೆ.
ಆಗಸ್ಟ್ 30ರಂದು ಪಂಜದಲ್ಲಿ ನಡೆದ ಪ್ರೌಢ ಶಾಲಾ ವಿಭಾಗಲ್ಲೂ ತಾಲುಕು ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದು ಅಭೂತ ಪೂರ್ವ ಸಾಧನೆ ಮಾಡಿದೆ.ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದೆ.


ಶಾಲಾ ಸಂಚಾಲಕರಾದ ಕೆ.ಎಂ ಮೊಹಿಯುದ್ದೀನ್ ಮುಖ್ಯೋಪಾದ್ಯಾಯರಾದ ಎಮ್.ಎಸ್.ಎಮ್ ಅಬ್ದುಲ್ ರಹೀಂ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಮಾರ್ಗದರ್ಶನ ನೀಡಿದ್ದಾರೆ.