ಐವರ್ನಾಡು : ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ

0

ಐವರ್ನಾಡಿನ ಸದಾಶಿವ ಪಾಲೆಪ್ಪಾಡಿ ಎಂಬವರು ಕಾಣೆಯಾಗಿದ್ದು ಇಂದು ಬೆಳಿಗ್ಗೆ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಮಂಗಳೂರಿನ ಕಾವೂರಿನಲ್ಲಿ ಸೆ.2 ರಂದು ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದರು.


ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಲಾಗಿತ್ತು. ಇಂದು ಸದಾಶಿವರವರು ಬೆಳ್ಳಾರೆಯಲ್ಲಿ ಪತ್ತೆಯಾಗಿದ್ದು ಬೆಳ್ಳಾರೆ ಪೊಲೀಸ್ ಠಾಣೆಗೆ ಹಾಜರಾಗಿ ಬಳಿಕ ಗ್ರಾಮ ಪಂಚಾಯತ್ ಸದಸ್ಯ ಯೋಗೀಶ ಕಲ್ಲಗದ್ದೆ ,ಸಿಬ್ಬಂದಿಗಾಳಾದ ಕುಮಾರ ಕಟ್ಟತ್ತಾರು ,ಪ್ರಜ್ವಲ್ ರವರೊಂದಿಗೆ ಮನೆಗೆ ತೆರಳಿದ್ದಾರೆಂದು ತಿಳಿದು ಬಂದಿದೆ.
ಇವರು ಮಂಗಳೂರಿನಿಂದ ತನ್ನ ಸ್ನೇಹಿತನ ಮನೆಗೆ ಹೋಗಿರುವುದಾಗಿ ತಿಳಿಸಿದ್ದಾರೆನ್ನಲಾಗಿದೆ.