ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ 2022 ರ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ

0

 

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಫಾತಿಮತ್ ಮುಬೀನಾ-(509) ಶ್ರೀರಕ್ಷಾ-(455) ನೀಟ್ ಪರೀಕ್ಷೆ ಯಲ್ಲಿ ಉತ್ತಮ ಅಂಕ ಗಳಿಸಿರುತ್ತಾರೆ.

ಹದಿನೈದು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಹನ್ನೊಂದು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ವೈದ್ಯಕೀಯ ವ್ಯಾಸಂಗಕ್ಕೆ ಅರ್ಹತೆ ಗಳಿಸಿರುತ್ತಾರೆ.

 

ಕು. ಫಾತಿಮತ್ ಮುಬೀನಾ ರವರು ಸುಳ್ಯದ ಗಾಂಧಿನಗರ ನಿವಾಸಿಗಳಾದ ಶ್ರೀ ಅಬೂಬಕರ್ ಹಾಗೂ ರಬಿಯ ರವರ ಪುತ್ರಿ. ಶ್ರೀ ರಕ್ಷಾ ರವರು ಸುಳ್ಯದ ಬಡ್ಡಡ್ಕ ನಿವಾಸಿ ವೆಂಕಟರಾಜು ಬಿ.ಆರ್ ಮತ್ತು ಶ್ರೀಮತಿ ಸುವರ್ಣಲತಾ ರವರ ಪುತ್ರಿ ಶ್ರೀ ರಕ್ಷಾ ರವರು 2022 ರ ಸಿ.ಇ.ಟಿ ಪರೀಕ್ಷೆಯಲ್ಲಿ 600 ನೇ ರ‍್ಯಾಂಕ್‌ ಹಾಗೂ ಜೆಇಇ ನಲ್ಲಿ 91.33 ಪರ್ಸಟೈಲ್ ಹಾಗೂ ಅಗ್ರಿಕಲ್ಚರ್ ಬಿ.ಎಸ್. ಸಿ ಯಲ್ಲಿ 146 ನೇ ರ‍್ಯಾಂಕ್‌ ಪಡೆದುಕೊಂಡಿರುತ್ತಾರೆ. ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಸುಳ್ಯದ ಅಮರಜ್ಯೋತಿ ಕಾಲೇಜಿಗೆ ವಿಶೇಷ ಮನ್ನಣೆ ಗಳಿಸಿಕೊಟ್ಟ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರೇಣುಕಾಪ್ರಸಾದ್ ಕೆ ವಿ , ಕಾಲೇಜಿನ ಸಿ.ಇ.ಓ ಡಾ. ಉಜ್ವಲ್ ಯು ಜೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ಯಶೋದ ರಾಮಚಂದ್ರ ಹಾಗೂ ಎಲ್ಲಾ ಭೋದಕ ಭೋದಕೇತರ ವೃಂದದವರು ಇವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣಕರ್ತರಾಗಿ ಶ್ರಮಿಸಿದ ಅಧ್ಯಾಪಕರಿಗೆ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರೇಣುಕಾಪ್ರಸಾದ್ ಕೆ ವಿ , ಕಾಲೇಜಿನ ಸಿ.ಇ.ಓ ಡಾ. ಉಜ್ವಲ್ ಯು.ಜೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ಯಶೋದ ರಾಮಚಂದ್ರ ಅವರು ಹಾರ್ದಿಕವಾಗಿ ಅಭಿನಂದಿಸಿರುತ್ತಾರೆ.