ಮಂಡೆಕೋಲು  : ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ನೇತೃತ್ವದಲ್ಲಿ ಶ್ರಮದಾನ

0

 

ವೀರವನಿತೆ ಕ್ರೀಡಾ ಹಾಗೂ ಕಲಾ ಸಂಘದ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಹಾಗೂ ಗ್ರಾಮದ ಇನ್ನಿತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಂಡೆಕೋಲಿನ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಬಳಿಯಿಂದ ಆರಂಭಗೊಂಡು ಮಂಡೆಕೋಲು ಮೇಲಿನ ಪೇಟೆ ತನಕ ಪ್ಲಾಸ್ಟಿಕ್, ಬಾಟಲ್ ಗಳ ಸಹಿತ ತ್ಯಾಜ್ಯವಸ್ತುಗಳನ್ನು ಸ್ವಚ್ಛ ಮಾಡುವ ಕಾರ್ಯ ನಡೆಯಿತು. ಗ್ರಾಮ ಪಂಚಾಯತ್, ಒಡಿಯೂರು ಗ್ರಾಮಾಭಿವೃದ್ಧಿ ಯೋಜನೆ, ನವೋದಯ ಸ್ವಸಹಾಯ ಸಂಘ, ಸ್ತ್ರೀಶಕ್ತಿ ಒಕ್ಕೂಟ, ಅರೋಗ್ಯ ಸಿಬ್ಬಂಧಿಗಳು, ಅಂಗನವಾಡಿ ಕಾರ್ಯಕರ್ತೆಯರು,ಆರಕ್ಷಕ ಸಿಬ್ಬಂಧಿಗಳು ಮೊದಲಾಗಿ ವಿವಿಧ ಸಂಘಟನೆಗಳ ಪಧಾಧಿಕಾರಿಗಳು ಸದಸ್ಯರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು