ಚಿತ್ರಕಲಾ ಸ್ಪರ್ಧೆಯಲ್ಲಿ ಕೃತಿಕಾ ಬಾಲಾಡಿ ತೃತೀಯ

0

ಭಾರತ್ ಸ್ಕೌಟ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬುಲ್ ಬುಲ್ ವಿಭಾಗದಲ್ಲಿ ಕೃತಿಕಾ ಬಾಲಾಡಿ ತೃತೀಯ ಸ್ಥಾನ ಪಡೆದು ನಗದು ಹಾಗೂ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತಾಳೆ.

ಇವಳು ಸುಳ್ಯದ ಸೈoಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ. ನಿತ್ಯಾನಂದ ಬಾಲಾಡಿ ಮತ್ತು ರತ್ನಾವತಿ ದಂಪತಿಗಳ ಪುತ್ರಿ.