ಪ್ರಧಾನಿ ನರೇಂದ್ರ ಮೋದಿಯವರ 72 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ

0

 

 

ಭ್ರಷ್ಟಚಾರ ನಿರ್ಮೂಲನೆಯ ಮಾಧ್ಯಮದ ಆಂದೋಲನವು ಯಶಸ್ಸಾಗಲಿ- ಭ್ರಷ್ಟಚಾರ ನಿರ್ಮೂಲನೆಯಾಗಲಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 72 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸುಳ್ಯ ಗಾಂಧಿನಗರದ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಇಂದು ಬೆಳಗ್ಗೆ ಪ್ರಾರ್ಥಿಸಲಾಯಿತು.
ವಿಶ್ವ ನಾಯಕರಾಗಿರುವ ಪ್ರಧಾನಿಯವರ ಆಯುಷ್ಯ ಆರೋಗ್ಯ ವೃದ್ದಿಯಾಗಲಿ. ಭಾರತ ದೇಶವು ವಿಶ್ವ ಗುರುವಾಗಿ ಹೊರಹೊಮ್ಮುವಂತಾಗಲಿ. ಸಕಲ ದೈವ ದೇವರು ಪ್ರಧಾನಿಯವರಿಗೆ ಹೆಚ್ಚಿನ ಶಕ್ತಿ ಕರುಣಿಸಲಿ. ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ  ನಿರ್ಮೂಲನೆಗಾಗಿ ಮಾಧ್ಯಮದ ಮೂಲಕ ಆಂದೋಲನ ನಡೆಯುತ್ತಿದ್ದು ಸಂಪೂರ್ಣವಾಗಿ ಯಶಸ್ಸು ಸಿಗುವಂತಾಗಲಿ. ಸಮಾಜದಲ್ಲಿ ಶಾಂತಿ ಸಮೃದ್ಧಿಯು ನೆಲೆಸುವಂತಾಗಲಿ ಎಂದು ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಉಮೇಶ್ ಪಿ.ಕೆ ಯವರು ದೈವಸ್ಥಾನದ ನಡೆಯಲ್ಲಿ ಪ್ರಾರ್ಥಿಸಿದರು.


ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿಯ ಭಾಸ್ಕರ ಗೌಡ ಐಡಿಯಲ್, ಸೋಮನಾಥ ಪೂಜಾರಿ, ಕೇಶವ ನಾಯಕ್, ಹರೀಶ್ ಬೂಡುಪನ್ನೆ, ಪ್ರಸಾದ್ ಹಾಗೂ ಸ್ಥಳೀಯರಾದ ಅನೂಪ್ ಪಾಪ್ಯುಲರ್, ಶೇಖರ ಪೂಜಾರಿ, ತಿಮ್ಮಪ್ಪ ಗೌಡ ನಾವೂರು, ಸುಧಾಕರ ಕೇರ್ಪಳ ಮತ್ತಿತರರು ಹಾಗೂ ಪ್ರಧಾನಿಯವರ ಅಭಿಮಾನಿಗಳು ಉಪಸ್ಥಿತರಿದ್ದರು. ದೈವಸ್ಥಾನಕ್ಕೆ ಆಗಮಿಸಿದ ಎಲ್ಲರಿಗೂ ಸಿಹಿ ತಿಂಡಿ ವಿತರಿಸಿ ಮೋದಿಯವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.