ಬೊಳುಬೈಲು-ಪ್ರಾ.ಕೃ.ಪ.ಸ. ಸಂಘ ಹಾಗೂ ನವಚೇತನ ಯುವಕಮಂಡಲ ವತಿಯಿಂದ ತರಕಾರಿ ಕೃಷಿ ಮಾಹಿತಿ ಕಾರ್ಯಗಾರ

0

 

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ) ಜಾಲ್ಸೂರು ಮತ್ತು ನವಚೇತನ ಯುವಕ ಮಂಡಲ(ರಿ) ಬೊಳುಬೈಲು ಸುಳ್ಯ ತಾಲೂಕು ಇದರ ಜಂಟಿ ಆಶ್ರಯದಲ್ಲಿ ತರಕಾರಿ ಕೃಷಿ ಮಾಹಿತಿ ಕಾರ್ಯಗಾರ ನವಚೇತನ ಸಭಾಭವನ ಯುವಕ ಮಂಡಲ ಬೊಳುಬೈಲಿನಲ್ಲಿ ನಡೆಯಿತು.

 

ತರಕಾರಿ ಕೃಷಿ ಮಾಹಿತಿಗಾರರಾದ ಶಿವಪ್ರಸಾದ್ ವರ್ಮುಡಿ
ತರಕಾರಿ ಕೃಷಿ,ಆರೋಗ್ಯಕ್ಕೆ ಅದರ ಪ್ರಯೋಜನಗಳು ಹಾಗೂ ಬೆಳೆಯುವ ವಿಧಾನದ ಕುರಿತಂತೆ ಉಪಯುಕ್ತ ಮಾಹಿತಿ ನೀಡಿದರು.ಕನಕಮಜಲು ಪ್ರಾ.ಕೃ.ಪ.ಸ.ಸಂಘ ನಿ.ಜಾಲ್ಸೂರು ಇದರ ಅಧ್ಯಕ್ಷರಾದ ಡಾ| ಗೋಪಾಲಕೃಷ್ಣ ಭಟ್ ಎ. ಸಭಾಧ್ಯಕ್ಷತೆ ವಹಿಸಿದ್ದರು.ನವಚೇತನ ಯುವಕ ಮಂಡಲ(ರಿ) ಬೊಳುಬೈಲು ಇದರ ಅಧ್ಯಕ್ಷರಾದ ಶಶಿಪ್ರಸಾದ್ ಕಾಟೂರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.ಕನಕಮಜಲು ಪ್ರಾ.ಕೃ.ಪ.ಸ.ಸಂಘ.ನಿ.ಜಾಲ್ಸೂರು ಇದರ ಮುಖ್ಯ ಕಾರ್ಯನಿರ್ಹಣಾಧಿಕಾರಿ ಲೋಹಿತ್ ಕುಮಾರ್ ಉಪಸ್ಥಿತರಿದ್ದರು.ಪ್ರವೀಣ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.ಜಯಪ್ರಕಾಶ್ ಬೈತಡ್ಕ ಸ್ವಾಗತಿಸಿದರು.ಲೋಹಿತ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here