ಪಾರ್ವತಿ ನಾಯರ್ ನೀರಬಿದಿರೆ ಹೃದಯಾಘಾತದಿಂದ ನಿಧನ

0

 

ದುಗ್ಗಲಡ್ಕ ಸಮೀಪದ ನೀರಬಿದಿರೆ ದಿ. ಚಾತು ನಾಯರ್ ಅವರ ಪತ್ನಿ‌ ಶ್ರೀಮತಿ ಪಾರ್ವತಿ ನಾಯರ್ ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ನಿನ್ನೆ ಸಂಜೆ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ತಕ್ಷಣವೇ ಸುಳ್ಯ ಆಸ್ಪತ್ರೆಗೆ ಕೊಂಡೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಮಧ್ಯ ರಾತ್ರಿ ವೇಳೆಗೆ ಕೊನೆಯುಸಿರೆಳೆದರು.

ಮೃತರು ಪುತ್ರ ಮಾಧವ, ಪುತ್ರಿಯರಾದ ಭಾರತಿ, ಸಾವಿತ್ರಿ, ಜಲಜ, ಶೈಲಜಾ, ಶಶಿಕಲಾ, ಸಹೋದರರಾದ ಬಾಲಕೃಷ್ಣ ನಾಯರ್ ನೀರಬಿದಿರೆ, ರಾಮಚಂದ್ರ ನಾಯರ್ ಪುತ್ತೂರು, ಸಹೋದರಿಯರಾದ ಮೀನಾಕ್ಷಿ, ಕಮಲಾ, ಲೀಲಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.