ಹರಿಹರ ಪಲ್ಲತಡ್ಕದಲ್ಲಿ ಪೋಷಣ್ ಮಾಸಚರಣೆಯ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಅಮೃತಗೊಂಚಲು ಸಭೆ

0

 

ಹರಿಹರ ಪಲ್ಲತ್ತಡ್ಕ ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗ ದಲ್ಲಿ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಮಾಸಚರಣೆಯ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಅಮೃತ ಗೊಂಚಲು ಸಭೆ ಕಾರ್ಯಕ್ರಮ ಸೆ.21 ರಂದು ಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯಿತು.

 

ಶ್ರೀಮತಿ ಹರ್ಷಿಣಿಯವರು ಅಧ್ಯಕ್ಷತೆಯನ್ನು ವಹಿಸಿದರು. ಶ್ರೀಮತಿ ತಾರಾಮಲ್ಲಾರ ಉದ್ಘಾಟಿಸಿದರು. ಕೊಲ್ಲಮೊಗ್ರ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿಜಯರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ ಆರೋಗ್ಯಾಧಿಕಾರಿ ಡಾ. ತ್ರಿಮೂರ್ತಿ ರವರು ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಿದರು. ಹರಿಹರೇಶ್ವರ ದೇವಸ್ಥಾನ ವ್ಯವಸ್ಥಾಪನ ಆಡಳಿತ ಮಂಡಳಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಕುಜುಗೋಡುರವರು ಸಮುದಾಯದಲ್ಲಿ ಸಹಭಾಗಿತ್ವ ಸಹಕಾರ ಪೌಷ್ಟಿಕ ಆಹಾರದ ಪ್ರಯೋಜನ ಗಳ ಬಗ್ಗೆ ಮಾಹಿತಿ ನೀಡಿದರು.

ಪಯಸ್ವಿನಿ ಬ್ಯಾಂಕ್ ಗೌರವಾಧ್ಯಕ್ಷರಾದ ಶ್ರೀಮತಿ ಲತಾ ರವರು ಬ್ಯಾಂಕ್ ಸಾಲದ ಬಗ್ಗೆ ಮಾಹಿತಿ ನೀಡಿದರು ಸಭೆಯಲ್ಲಿ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಮೋಹಿನಿ ಬಾಳುಗೋಡು, ಶ್ರೀಮತಿ ತಾರಾ ಐನೆಕಿದು, ರೇಣುಕಾ, ಆಶಾ ಕಾರ್ಯಕರ್ತೆಯವರಾದ ಶ್ರೀಮತಿ ಪುಪ್ಪಾವತಿ, ಶೋಭಾ, ಹೇಮಾವತಿ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸದಸ್ಯರು, ಉಪಸ್ಥಿತರಿದ್ದರು . ಶ್ರೀಮತಿ ಅಶ್ವಿನಿ ಸ್ವಾಗತಿಸಿದರು, ಶ್ರೀಮತಿ ನೇತ್ರಾವತಿ ವಂದಿಸಿದರು. ಶ್ರೀಮತಿ ತೀಥ೯ಕುಮಾರಿ ನಿರೂಪಿಸಿದರು.

LEAVE A REPLY

Please enter your comment!
Please enter your name here