ಸುಳ್ಯ ನಗರ ವ್ಯಾಪ್ತಿಯ ಬೀರಮಂಗಲ ವಾರ್ಡಿನಲ್ಲಿ ವಿದ್ಯುತ್ ತಂತಿಯನ್ನು ಆವರಿಸಿದ ಬಿದಿರಿನ ಪೊದೆ

0

 

ಸುಳ್ಯ ನಗರದ ಜೂನಿಯರ್ ಕಾಲೇಜ್ ಬಳಿಯ ಬೀರಮಂಗಲ ವಾರ್ಡಿಗೆ ಸಂಬಂಧಿಸಿದ ಅಡ್ಡ ರಸ್ತೆಯಲ್ಲಿ ವಿದ್ಯುತ್ ಕಂಬ ಸಮೇತ ವಿದ್ಯುತ್ ತಂತಿಯನ್ನು ಆವರಿಸಿಕೊಂಡಿರುವ ಬಿದಿರಿನ ಪೊದೆಯನ್ನು ಕಾಣಬಹುದು. ಅಲ್ಲದೆ ವಿದ್ಯುತ್ ಕಂಬ ಒಂದು ಬದಿಗೆ ವಾಲಿದೆ.
ಈ ರಸ್ತೆಯ ಮೂಲಕ ದಿನ ನಿತ್ಯ ವಿದ್ಯಾರ್ಥಿಗಳು ಸಾರ್ವಜನಿಕರು ನಡೆದುಕೊಂಡು ಹೋಗುತ್ತಿರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಂಬಧ ಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ವಿಷಯ ತಿಳಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲವೆನ್ನುತ್ತಾರೆ ಪರಿಸರದ ನಿವಾಸಿಗಳು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಪೊದೆಯನ್ನು ತೆರವುಗೊಳಿಸಿ ಲೈನ್ ಕ್ಲಿಯರ್ ಮಾಡಬೇಕಾದ ಅನಿವಾರ್ಯತೆ ಇದೆ.