ಸ್ವರಾಜ್ಯಕ್ಕೆ ಮುಕ್ಕಾಲು ನೂರು ಸಂಭ್ರಮಕ್ಕೆ ಕನ್ನಡದ ತೇರು

0

 

ಯುವ ಬ್ರಿಗೇಡ್ ನೇತೃತ್ವದ ರಥ ಸುಳ್ಯ ಆಗಮನ

ಭಾರತದ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ಎಂಬ ಘೋಷಣೆಯೊಂದಿಗೆ ಯುವಾ ಬ್ರಿಗೇಡ್ ಸುಮಾರು ಮೂರು ತಿಂಗಳ ಹಿಂದೆ ಉತ್ತರ ಕರ್ನಾಟಕದ ಬೀಳಗಿ ಯಿಂದ ಕನ್ನಡ ತೇರನ್ನ ಹೊರಡಿಸಿದ್ದು, ಆ ರಥಯಾತ್ರೆ ಸೆ.24 ರಂದು ಸುಳ್ಯ ತಲುಪಿದೆ

ಸುಮಾರು ೨೪ ಜಿಲ್ಲೆಗಳನ್ನು ದಾಟಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಂದ ಸ್ವಾಗತ ಗೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸಿತು. ಸುಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುಳ್ಯ ಚೆನ್ನಕೇಶವ ದೇವಸ್ಥಾನದ ಎದುರುಗಡೆ ಯುವಾ ಬ್ರಿಗೇಡ್ ಕಾರ್ಯಕರ್ತರು ಮತ್ತು ಹಿತೈಷಿಗಳು ಸ್ವಾಗತಿಸಿದರು. ಅಲ್ಲಿಂದ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜು , ಸುಳ್ಯ‌ ಗಾಂಧಿನಗರ ಕಾಲೇಜ್ ಮತ್ತು ಸ್ನೇಹ ವಿದ್ಯಾಸಂಸ್ಥೆಯ ನೂರಾರು ವಿದ್ಯಾರ್ಥಿಗಳನ್ನು ಸಂದರ್ಶಿಸಿತು. ಇದು ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸಿ ಸುಮಾರು ಎರಡುವರೆ ಸಾವಿರ ವಿದ್ಯಾರ್ಥಿಗಳನ್ನು ಸಂದರ್ಶಿಸಿತು . ಇದರ ನೇತೃತ್ವವನ್ನು ದಕ್ಷಿಣ ಕನ್ನಡ ಜಿಲ್ಲಾ ಯುವಾ ಬ್ರಿಗೇಡ್ ಸಂಚಾಲಕ ಮನೀಶ್ ಗೂನಡ್ಕ ವಹಿಸಿದ್ದರು .

LEAVE A REPLY

Please enter your comment!
Please enter your name here