ಸುಳ್ಯ ಯಾದವ ಸಭಾ ತಾಲೂಕು ಸಮಿತಿಯ ಮಹಾಸಭೆ

0

 

 

ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು, ತಾಲೂಕು ಸಮಿತಿ ಸುಳ್ಯ, ಯಾದವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಗಳ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.25 ರಂದು ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.

ಇದರ ಅಧ್ಯಕ್ಷತೆಯನ್ನು ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ವಹಿಸಿದರು. ವೇದಿಕೆಯಲ್ಲಿ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ.ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು, ಕೇಂದ್ರ ಸಮಿತಿ ಸಲಹಾ ಮಂಡಳಿ ಅಧ್ಯಕ್ಷ ಸುದಾಮ ಆಲೆಟ್ಟಿ, ಕೇಂದ್ರ ಸಮಿತಿ ಕಾರ್ಯದರ್ಶಿ ರಾಮಚಂದ್ರ ಕೇನಾಜೆ, ತಾಲೂಕು ಸಮಿತಿ ಉಪಾಧ್ಯಕ್ಷರಾದ ಬಾಲಕೃಷ್ಣ ಅಡ್ಡಬೈಲು, ಕೃಷ್ಣ ಅಕ್ಕಪ್ಪಾಡಿ, ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ, ಕೋಶಾಧಿಕಾರಿ ದಾಮೋಧರ ಕೇನಾಜೆ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಜೀವಿ ಪರ್ಲಿಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಯಾದವ ಸಮಾವೇಶ, ತಾಲೂಕು ಸಮಿತಿಗೆ ಯಾದವ ಸಭಾಭವನದ ಸ್ಥಳ ಖರೀದಿ ಬಗ್ಗೆ, ವಾರ್ಷಿಕ ಸದಸ್ಯತನ ಕ್ರೋಡಿಕರಣದ ಬಗ್ಗೆ, ಮಹಿಳಾ ವೇದಿಕೆ ಮತ್ತು ಯುವವೇದಿಕೆಯನ್ನು ಭಧ್ರಪಡಿಸುವ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರತೀ ಪ್ರಾದೇಶಿಕ ಸಮಿತಿಯ ಜವಾಬ್ದಾರಿಗಳನ್ನು ನಿಭಾಯಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ ಆರೋಗ್ಯ ನಿಧಿಯ ಬಗ್ಗೆ ಪ್ರಸ್ತಾಪನೆ ಮಂಡಿಸಲಾಯಿತು. ಕಡಬ ತಾಲೂಕು ಸಮಿತಿಯನ್ನು ರಚಿಸುವ ಬಗ್ಗೆ ಮತ್ತು ಸದಸ್ಯತನವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ಮುಂದಿನ ಕೇಂದ್ರ ಸಮಿತಿಯಲ್ಲಿ ನಿರ್ಣಯಿಸಲು ತೀರ್ಮಾನಿಸಲಾಯಿತು. ಯಾದವ ಸಭೆಯು ನಡೆದು ಬಂದ ದಾರಿಯನ್ನು ಕೇಂದ್ರ ಸಮಿತಿ ಸಲಹಾಮಂಡಳಿ ಅಧ್ಯಕ್ಷ ಸುದಾಮ ಆಲೆಟ್ಟಿ ವಿವರಿಸಿದರು. ಕೇಂದ್ರ ಸಮಿತಿ ಅಧ್ಯಕ್ಷ ನೆಲೆಯಲ್ಲಿ ಎ.ಕೆ.ಮಣಿಯಾಣಿಯವರು, ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು, ಕಾರ್ಯದರ್ಶಿ ರಾಮಚಂದ್ರ ಕೇನಾಜೆ, ಮಹಿಳಾ ಘಟಕದ ಅಧ್ಯಕ್ಷೆ ರಾಜೀವಿ ಪರ್ಲಿಕಜೆ ಮಾತನಾಡಿದರು. ತಾಲೂಕು ಸಮಿತಿಯ ವರದಿಯನ್ನು ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ ವಾಚಿಸಿದರು. ಲೆಕ್ಕಪತ್ರ ಮಂಡನೆಯನ್ನು ತಾಲೂಕು ಕೋಶಾಧಿಕಾರಿ ದಾಮೋಧರ ಕೇನಾಜೆ ಓದಿದರು. ತಾಲೂಕು ಮಹಿಳಾ ಘಟಕದ ವರದಿ ಮತ್ತು ಲೆಕ್ಕಪತ್ರವನ್ನು ಕಾರ್ಯದರ್ಶಿ ಚಂಚಲಾಕ್ಷಿ ಓದಿದರು. ಮಹಿಳಾ ಘಟಕದ ಲೆಕ್ಕೆಪತ್ರ ಮತ್ತು ವರದಿಯನ್ನು ಯುವ ವೇದಿಕೆಯ ಕೋಶಾಧಿಕಾರಿ ಸಾವಿತ್ರಿ ಕಣೆಮರಡ್ಕ ವಾಚಿಸಿದರು. ಕರುಣಾಕರ ಹಾಸ್ಪಾರೆಯವರು ಮುಂದಿನ ದಿನಗಳಲ್ಲಿ ಸಮಿತಿಯು ಕೈಗೊಳ್ಳಲಿರುವ ಕಾರ್ಯಕ್ರಮದ ಬಗ್ಗೆ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ತಾಲೂಕು ಸಮಿತಿ ಕೋಶಾಧಿಕಾರಿ ದಾಮೋಧರ ಕೇನಾಜೆ ವಂದಿಸಿದರು. ಸಭೆಯಲ್ಲಿ ಎಲ್ಲಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ಯುವವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.