ಅಪಘಾತದಲ್ಲಿ ಗಾಯಗೊಂಡ ಕೆ.ವಿ.ಜಿ ಐ.ಟಿ.ಐ ವಿದ್ಯಾರ್ಥಿಗೆ ಡಾ. ರೇಣುಕಾ ಪ್ರಸಾದ್ ಕೆ.ವಿಯವರಿಂದ ಆರ್ಥಿಕ ಸಹಾಯ

0

 

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿಯವರ ಪರವಾಗಿಕೆ.ವಿ.ಜಿ ಐ.ಟಿ.ಐಯ ಪ್ರಾಂಶುಪಾಲರಾದ ಚಿದಾನಂದ ಗೌಡ ಬಾಳಿಲ ಅವರು ಇತ್ತೀಚೆಗೆ ಸುಳ್ಯ ಸಮೀಪದ ಅರಂಬೂರಿನಲ್ಲಿ ಬೈಕ್ ಅಪಘಾತವಾಗಿ ತೀವ್ರ ತರದ ಗಾಯದಿಂದ ಕಾಲು ಮುರಿತಕ್ಕೊಳಾಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಳ್ಯ ಕೆ.ವಿ.ಜಿ ಐ.ಟಿ.ಐನ ತೇಜಸ್ ಎಂಬ ವಿದ್ಯಾರ್ಥಿಗೆ ತುರ್ತು ಆರ್ಥಿಕ ಸಹಾಯವಾಗಿ ರೂ. 1೦,೦೦೦ವನ್ನು ನೀಡಿದರು.


ತಂದೆ ತಾಯಿ ಇಬ್ಬರು ಇಲ್ಲದೇ ತಬ್ಬಲಿಯಾಗಿರುವ ಕಾರಣ ಕಲ್ಲುಗುಂಡಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತ, ಸುಳ್ಯ ಕೆ.ವಿ.ಜಿ ಐ.ಟಿ.ಐ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತೇಜಸ್‌ನ ಕಷ್ಟಕ್ಕೆ ಡಾ. ರೇಣುಕಾ ಪ್ರಸಾದ್ ಕೆ.ವಿಯವರು ಸ್ಪಂದಿಸಿರುತ್ತಾರೆ. ಈ ಸಂಧರ್ಭದಲ್ಲಿ ಕೆ.ವಿ.ಜಿ ಐ.ಟಿ.ಐಯ ಕಛೇರಿ ಅಧೀಕ್ಷರಾದ ಭವಾನಿಶಂಕರ ಅಡ್ತಲೆ ಮತ್ತು ಕೆ.ವಿ.ಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಹಿರಿಯ ಪ್ರಬಂಧಕರಾದ ಅಂಕುಶ್. ಕೆಯವರು ಹಾಜರಿದ್ದರು.

LEAVE A REPLY

Please enter your comment!
Please enter your name here