ವೆಂಕಟರಾಮ ಭಟ್ ಅವರ ಕೃತಿ ಬಿಡುಗಡೆ

0

ಸುಳ್ಯದ ಪ್ರತಿಭಾ ವಿದ್ಯಾಲಯದ ಪ್ರಾಂಶುಪಾಲ, ಲೇಖಕ ವೆಂಕಟರಾಮ ಭಟ್‌ರವರು ಡಿ.ವಿ.ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗಗಳನ್ನು ತುಳುವಿಗೆ ಅನುವಾದಿಸಿದ್ದು, ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಗೊಂಡಿದೆ. ಇತ್ತೀಚೆಗೆ ತುಳು ಅಕಾಡೆಮಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ಕುಮಾರ್‌ರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವೆಂಕಟರಾಮ್ ಭಟ್ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.