ಸುಳ್ಯ ಯೋಜನಾ ಕಚೇರಿಯಲ್ಲಿ ಗಾಂಧಿ ಸ್ಮೃತಿ ಕಾರ್ಯಕ್ರಮ ಮತ್ತು ಜನಜಾಗೃತಿ ವೇದಿಕೆಯ ಸಭೆ

0

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸುಳ್ಯ ತಾಲೂಕು ಇದರ ವತಿಯಿಂದ ಜನಜಾಗೃತಿ ಸಭೆ ಮತ್ತು ಗಾಂಧಿ ಸ್ಮೃತಿ ಕಾರ್ಯಕ್ರಮ ಯೋಜನಾ ಕಚೇರಿ ಸಭಾಂಗಣದಲ್ಲಿ ಅ.2 ರಂದು ನಡೆಯಿತು.

ವೇದಿಕೆಯಲ್ಲಿ ಜನಜಾಗೃತಿ ಜಿಲ್ಲಾಧ್ಯಕ್ಷ ಎನ್. ಎ. ರಾಮಚಂದ್ರ, ತಾಲೂಕು ಜನಜಾಗೃತಿ ಅಧ್ಯಕ್ಷ ವಿಶ್ವನಾಥ ರೈ ಕಳಂಜ, ಜನಜಾಗೃತಿ ಪೂರ್ವಧ್ಯಕ್ಷರಾದ ಪಿ. ಸಿ. ಜಯರಾಮ್, ಭವಾನಿಶಂಕರ ಅಡ್ತಲೆ, ಮಹೇಶ್ ರೈ ಮೇನಾಲ, ಕೇಂದ್ರ ಒಕ್ಕೂಟ ಅಧ್ಯಕ್ಷ ಯತೀಶ್ ರೈ ದುಗ್ಗಲಡ್ಕ,ಎಂ. ವೆಂಕಪ್ಪ ಗೌಡ,ಯೋಜನಾಧಿಕಾರಿ ನಾಗೇಶ್ ಪಿ ಉಪಸ್ಥಿತರಿದ್ದರು.
ಗಾಂಧೀಜಿಯ ಬಗ್ಗೆ ಲೋಕನಾಥ್ ಅಮೆಚೂರು ವಿಚಾರ ಮಂಡಿಸಿದರು. ನ. 14 ರಂದು ಸುಳ್ಯದಲ್ಲಿ ನವಜೀವನೋತ್ಸವ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ವಾರ್ಷಿಕ ವರದಿ ಮಂಡಿಸಲಾಯಿತು. ಯೋಜನಾಧಿಕಾರಿ ನಾಗೇಶ್ ಸ್ವಾಗತಿಸಿ, ದೊಡ್ಡತೋಟ ಮೇಲ್ವಿಚಾರಕ ಸೀತಾರಾಮ ವಂದಿಸಿದರು. ಸಂಪಾಜೆ ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.