ಅ.10; ಸುಳ್ಯದಲ್ಲಿ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ- ಆಪರೇಟಿವ್ ಸೊಸೈಟಿ ಶಾಖೆ ಶುಭಾರಂಭ

0

 

ಸುಳ್ಯ ಜ್ಯೋತಿ ವೃತ್ತದ ಬಳಿ ಇರುವ ಗಣೇಶ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ- ಆಪರೇಟಿವ್ ಸೊಸೈಟಿ ಲಿ.ಇದರ ಆಗ್ರೋ ಬಿಸಿನೆಸ್ ಸೆಂಟರ್ ನ ಸುಳ್ಯ ಶಾಖೆ ಇಂದು (ಅ.10) ಶುಭಾರಂಭ ಗೊಳ್ಳಲಿದೆ.
ಸಂಸ್ಥೆಯನ್ನು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಲಬಾರ್ ಸೊಸೈಟಿಯ ಅಧ್ಯಕ್ಷ ರಾಹುಲ್ ಚಕ್ರಪಾಣಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಭಾಗವಹಿಸಲಿದ್ದಾರೆ.