ಕೊಲ್ಲಮೊಗ್ರದಲ್ಲಿ ಮದ್ಯದಂಗಡಿ ಆರಂಭ

0

 

ಕೊಲ್ಲಮೊಗ್ರು, ಕಲ್ಮಕಾರು ಗ್ರಾಮಸ್ಥರ ಸಭೆ

ಹೋರಾಟ ಸಮಿತಿ ರಚನೆ, ತೀವ್ರ ಹೋರಾಟಕ್ಕೆ ನಿರ್ಧಾರ

 

ಕೊಲ್ಲಮೊಗ್ರು ಪೇಟೆಯಲ್ಲಿ ಮಧ್ಯದಂಗಡಿ ಅ.19 ರಂದು ಆರಂಭವಾಗಿದ್ದು ಈ ಬಗ್ಗೆ ಇಂದು ಕೊಲ್ಲಮೊಗ್ರು ಮತ್ತು ಕಲ್ಮಕಾರು ಗ್ರಾಮಸ್ಥರ ನಡೆದಿದ್ದು ಮದ್ಯ ವಿರೋಧಿ ಹೋರಾಟ ಸಮಿತಿ ರಚನೆಯಾಗಿದೆ.

ಅಲ್ಲದೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲು ನಿರ್ಧಾರವಾಗಿದ್ದು ಸಭೆಯಲ್ಲಿ ಗ್ರಾ.ಪಂ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಲು ಆಗ್ರಹ ಕೇಳಿ ಬಂದಿದೆ. ಇಂದು ನಡೆದ ಸಭೆಯಲ್ಲಿ ಸಭೆಯಲ್ಲಿ 6 ಜನ ಗ್ರಾ.ಪಂ ಸದಸ್ಯರು ಪಾಲ್ಗೊಂಡಿದ್ದರು. ಸಭೆಯಲ್ಲಿ ಗ್ರಾ.ಪಂ ವತಿಯಿಂದ ಯಾವುದೇ ಅನುಮತಿ ಪಡೆಯದೆ ಹಾಗೂ ಗ್ರಾಮಸ್ಥರ ಆಶಯಕ್ಕೆ ವಿರುದ್ಧವಾಗಿ ವೈನ್ ಶಾಪ್ ಆರಂಭವಾಗಿದ್ದು ಇದರ ತೆರವಿಗೆ ಮಾಡುವುದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವುದು, ಮದ್ಗದ ಅಂಗಡಿ ತೆರವುಗೊಳಿಸದೇ ಇದ್ದಲ್ಲಿ ಗ್ರಾ.ಪಂ ಸದಸ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸುವುದಾಗಿ ಗ್ರಾ. ಪಂ. ಸದಸ್ಯರು ಹೇಳಿಕೊಂಡಿದ್ದಾರೆ.

 

ಇಂದು ನಡೆದ ಸಭೆಯ ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಜಯಶ್ರೀ ಚಾಂತಾಳ, ಗ್ರಾ.ಪಂ ಸದಸ್ಯರುಗಳಾದ ಮಾದವ ಚಾಂತಾಳ, ಪುಷ್ಪರಾಜ ಪಡ್ಪು’ ಅಶ್ವಥ್ ಯಾಲದಾಳು, ಮೋಹಿನಿ ಕಟ್ಟ, ಶಿವಮ್ಮ ಕಟ್ಟ, ತಾಲೂಕು ಜನ ಜಾಗೃತಿ ವೇದಿಕೆ ಸದಸ್ಯ ಕೆ ಪಿ ಗಿರಿದರ, ಒಕ್ಕೂಟದ ಅಧ್ಯಕರಾದ ಇಂದಿರಾ ಚಾಳೆಪ್ಪಾಡಿ, ತೀರ್ಥರಾಮ ದೋಣಿಪಳ್ಳ, ನಿವೃತ್ತ ಶಿಕ್ಷಕ ಶಿವರಾಮ ಕುಂಞೆಟ್ಟಿ, ಹರ್ಷ ಬಳ್ಳಡ್ಕ ಮತ್ತಿತರರು ವೇದಿಕೆಯಲ್ಲಿದ್ದರು. ಸಭೆಯಲ್ಲಿ 150ಕ್ಕೂ ಮಿಕ್ಕಿ ಜನ ಪಾಲ್ಗೊಂಡಿದ್ದರು.

ಸಭೆಯ ಬಳಿಕ ಸಭೆಯಲ್ಲಿದ್ದ ಎಲ್ಲರೂ ಸೇರಿ ಗ್ರಾ.ಪಂ ಗೆ ಮನವಿ ಸಲ್ಲಿಸಿ ಮದ್ಯದಂಗಡಿ ತೆರವಿಗೆ ಆಗ್ರಹಿಸಲಾಯಿತು.