ಪಂಜ : ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಚಿಕಿತ್ಸಾ ಶಿಬಿರ

0

 

ಲಯನ್ಸ್ ಕ್ಲಬ್ ಪಂಜ , ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ,
ಪ್ರಸಾದ್ ನೇತ್ರಾಲಯ , ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂದತ್ವ ವಿಭಾಗ),ಡಾ.ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಚಿಕಿತ್ಸಾ ಶಿಬಿರ ಅ.16 ರಂದು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿತು.

 

ಕಾರ್ಯಕ್ರಮದಲ್ಲಿ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ ರವರು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ ಸಭಾಧ್ಯಕ್ಷತೆ ವಹಿಸಿದ್ದರು.ಪ್ರಸಾದ್ ನೇತ್ರಾಲಯದ ಡಾ.ಅಕರ್ಷಿತ ಕಣ್ಣಿನ ತೊಂದರೆ ಬಗ್ಗೆ ಮಾಹಿತಿ ನೀಡಿದರು. ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೈಯದ್ , ಕಾರ್ಯಕ್ರಮದ ಪ್ರಾಯೋಜಕ ಸೀತಾರಾಮ ಕುದ್ವ , ಕಾರ್ಯಕ್ರಮದ ಸಂಯೋಜಕ ಬಾಲಕೃಷ್ಣ ಗೌಡ ಕುದ್ವ,ಲಯನ್ಸ್ ಕ್ಲಬ್, ಕೋಶಾಧಿಕಾರಿ ಕರುಣಾಕರ ಎಣ್ಣೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪುರುಷೋತ್ತಮ ದಂಬೆಕೋಡಿ ಸ್ವಾಗತಿಸಿದರು. ಬಾಲಕೃಷ್ಣ ಕುದ್ವ ಪ್ರಾಸ್ತಾವಿಕಗೈದರು. ಕರುಣಾಕರ ಎಣ್ಣೆಮಜಲು ವಂದಿಸಿದರು. ಕಾರ್ಯಕ್ರಮ ಸಂಯೋಜಕರಾಗಿ ನೇಮಿರಾಜ ಪಲ್ಲೋಡಿ ಸಹಕರಿಸಿದರು.
ಶಿಬಿರದಲ್ಲಿ 125 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. 25ಕ್ಕೂ ಹೆಚ್ಚು ಮಂದಿ ಶಸ್ತ್ರಚಿಕಿತ್ಸೆಗೆ ಹಾಜರಾಗಲು ಅನುಮತಿ ಪಡೆದಿರುತ್ತಾರೆ.ಅಗತ್ಯವುಳ್ಳವರಿಗೆ ಕಡಿಮೆ ದರದಲ್ಲಿ ಕನ್ನಡಕ ವ್ಯವಸ್ಥೆ ಮಾಡಲಾಯಿತು.

 

LEAVE A REPLY

Please enter your comment!
Please enter your name here