ಅರಂತೋಡು ಹನುಮಾನ್ ಶಾಖೆಯ ವತಿಯಿಂದ ಭಜನೆ ಮತ್ತು ಗೋಪೂಜಾ ಕಾರ್ಯಕ್ರಮ

0

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಅರಂತೋಡು ಹನುಮಾನ್ ಶಾಖೆಯ ವತಿಯಿಂದ ಶ್ರೀ ದುರ್ಗಾ ಮಾತಾ ಭಜನಾ ಮಂದಿರದಲ್ಲಿ ಭಜನಾ ಸೇವೆ ಹಾಗೂ ಸಾರ್ವಜನಿಕವಾಗಿ ಗೋಪೂಜನಾ ಕಾರ್ಯಕ್ರಮ ನಡೆಯಿತು. ಮಂದಿರದ ಅರ್ಚಕರು ಪೂಜೆ ನೆರವೇರಿಸಿದರು.

ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು, ಭಜನಾ ಮಂದಿರದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.