ಡಾ.ಗೀತಾ ದೊಪ್ಪರಿಗೆ ಪ್ರೆಸಿಡೆಂಟ್ ಅಪ್ರಿಸಿಯೇಷನ್ ಅವಾರ್ಡ್

0

ಎ ಎಂ ಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆ

ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ ಗೀತಾ ಜೆ ದೊಪ್ಪ ರವರು ಭಾರತೀಯ ವೈದ್ಯಕೀಯ ಪರಿಷತ್ತಿನಲ್ಲಿ ಮಹಿಳಾ ವೈದ್ಯರ ವಿಭಾಗದ ರಾಜ್ಯಾಧ್ಯಕ್ಷರಾಗಿ ಸಲ್ಲಿಸಿದ ಅಭೂತಾಪೂರ್ವ ಸೇವೆಯನ್ನು ಪರಿಗಣಿಸಿ, ಭಾರತೀಯ ವೈದ್ಯಕೀಯ ಪರಿಷತ್ ಮೆಡಿಕೊನ್- 88 ರಲ್ಲಿ ಪ್ರೆಸಿಡೆಂಟ್ ಅಪ್ರಿಷಿಯೇಷನ್ ಅವಾರ್ಡ್ ನೀಡಿ ಗೌರವಿಸಿದೆ.

 

 

ರಾಜ್ಯದಾದ್ಯಂತ ಸುಮಾರು 62 ಮಹಿಳಾ ವೈದ್ಯರ ಶಾಖೆಯನ್ನು ಸ್ಥಾಪಿಸುವಲ್ಲಿ ಡಾ ಗೀತಾ ಜೆ ದೊಪ್ಪರವರು ಪ್ರಮುಖ ಪಾತ್ರವಹಿಸಿದ್ದರು.

 

ಡಾ ಗೀತಾ ಜೆ ದೊಪ್ಪ , ರವರು ಭಾರತೀಯ ವೈದ್ಯಕೀಯ ಪರಿಷತ್ತಿನ ಅಕಾಡೆಮಿ ಆಫ್ ಮೆಡಿಕಲ್ ಸ್ಪೆಶಲಿಸ್ಟ್ಸನ ನ ರಾಜ್ಯ ಅಧ್ಯಕ್ಷರಾಗಿ 2022-24ರ ಅವಧಿಗೆ ಚುನಾಯಿತರಾಗಿರುತ್ತಾರೆ.
ಡಾ ಗೀತಾ ಅತ್ಯಧಿಕ ಮತಗಳಿಂದ 2022-23 ನೇ ಸಾಲಿಗೆ ಸೆಂಟ್ರಲ್ ವರ್ಕಿಂಗ್ ಕಮಿಟಿ ಶಾಶ್ವತ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರು ಮತ್ತು ಸುಳ್ಯ ಐಎಂಎ ಯ ಸ್ಥಾಪಕ ಅಧ್ಯಕ್ಷರಾದ ಡಾ ಚಿದಾನಂದರು, ಡಾ. ಗೀತಾರವರು ಐ.ಎಂ.ಎ. ಗೆ ನೀಡಿರುವ ಕೊಡುಗೆ ಮತ್ತು ಸಾಧನೆಗಾಗಿ ಅಭಿನಂದಿಸಿರುತ್ತಾರೆ.