ಬೆಳ್ಳಾರೆ ಜ್ಞಾನದೀಪದಲ್ಲಿ ರಂಗ ಚಟುವಟಿಕೆ ಕಾರ್ಯಾಗಾರ

0

ರಂಗಭೂಮಿ ಅವಕಾಶಗಳ ಆಗರ : ಸುಂದರ ರೈ ಮಂದಾರ

ರಂಗ ಕಲೆಯನ್ನು ಮೈಗೂಡಿಸಿಕೊಂಡ ವ್ಯಕ್ತಿ ಯಾವ ಕ್ಷೇತ್ರದಲ್ಲೂ ಯಶಸ್ವಿಯಾಗುತ್ತಾನೆ. ಪರಿಣಾಮಕಾರಿ ಬೋಧನೆ ರಂಗಕಲೆಯಿಂದ ಮಾತ್ರ ಸಾಧ್ಯ ಎಂದು ರಂಗಭೂಮಿ ಕಲಾವಿದ, ನಿರ್ದೇಶಕ ಸುಂದರ ರೈ ಮಂದಾರ ಹೇಳಿದರು.
ಅವರು ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವತಿಯಿಂದ ಬೆಳ್ಳಾರೆಯಲ್ಲಿ ನಡೆದ ಎರಡು ದಿನಗಳ ರಂಗ ಚಟುವಟಿಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕ ಶ್ರೇಷ್ಠ ರಂಗಕರ್ಮಿ:ಬಂಬಿಲ
ಕೇವಲ ಸರ್ಟಿಫಿಕೇಟ್ ಆಧಾರಿತ ಶಿಕ್ಷಣದಿಂದ ಹೊರಬಂದು ಕೌಶಲ್ಯಾಧಾರಿತ ಕ್ರಿಯಾಶೀಲ ಶಿಕ್ಷಣ ಪಡೆಯುವಂತಾಗಬೇಕು. ಜಗತ್ತಿನ ಶ್ರೇಷ್ಠ ರಂಗಕರ್ಮಿ ಒಬ್ಬ ಶಿಕ್ಷಕ ಆಗಿರುತ್ತಾನೆ ಎಂದು ಮೊದಲ ದಿನದ ರಂಗ ಚಟುವಟಿಕೆ ತರಬೇತಿ ನೀಡಿದ ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಹೇಳಿದರು.

ಪರಿಣಾಮಕಾರಿ ಬೋಧನೆಗೆ ರಂಗಕಲೆ ಸಹಕಾರಿ:ಮೌನೇಶ್ ವಿಶ್ವಕರ್ಮ
ಶಿಕ್ಷಕರು ರಂಗಕಲೆಯನ್ನು ಬಳಸಿಕೊಂಡು ಮಕ್ಕಳಲ್ಲಿರುವ ಸೃಜಶೀಲತೆಯನ್ನು ಬೆಳೆಸಬಹುದು. ಬೋಧನೆಯಲ್ಲಿ ರಂಗಕಲೆಯನ್ನು ಬಳಸಿಕೊಂಡಾಗ ಪರಿಣಾಮಕಾರಿಯಾಗುತ್ತದೆ ಎಂದು ಎರಡನೇ ದಿನದ ರಂಗ ಚಟುವಟಿಕೆಯ ತರಬೇತಿ ನೀಡಿದ ರಂಗ ನಿರ್ದೇಶಕ ಮೌನೇಶ್ ವಿಶ್ವಕರ್ಮ ಹೇಳಿದರು.
ಎರಡು ದಿನ ನಡೆದ ರಂಗ ಚಟುವಟಿಕೆಯಲ್ಲಿ ಸಂಸ್ಥೆಯ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರು ಭಾಗವಹಿಸಿದರು. ತುಳು ಸಿನಿಮಾ ಮತ್ತು ಧಾರಾವಾಹಿ ನಟ ಕುಂಬ್ರ ದಯಾಕರ ಆಳ್ವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಸ್ವಾಗತಿಸಿದರು. ಉಪನ್ಯಾಸಕ ಶರತ್ ಕಲ್ಲೋಣಿ ವಂದಿಸಿದರು. ಉಪನ್ಯಾಸಕ ಗಣೇಶ್ ನಾಯಕ್ ಪುತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರುಗಳಾದ ಬೃಂದಾ, ಗೀತಾ ಬಾಲಚಂದ್ರ, ಶೋಭಾ ಸಹಕರಿಸಿದರು.