ಕೊಯನಾಡು ಗುಡ್ಡೆಗದ್ದೆಯಲ್ಲಿ ಶ್ರೀ ಮಲೆಚಾಮುಂಡೇಶ್ವರಿ ಹಾಗೂ ಗುಳಿಗ ದೈವದ ಪ್ರತಿಷ್ಠೆ

0

ಶ್ರೀ ಮಲೆಚಾಮುಂಡಿ ಹಾಗೂ ಗುಳಿಗ ದೈವದ ಕೋಲ

ಕೊಡಗು ಸಂಪಾಜೆ ಗ್ರಾಮದ ಕೊಯನಾಡಿನ ಗುಡ್ಡಗದ್ದೆಯಲ್ಲಿರುವ ಶ್ರೀ ಮಲೆಚಾಮುಂಡೇಶ್ವರಿ ದೈವಸ್ಥಾನದಲ್ಲಿ ಬ್ರಹ್ಮಶ್ರೀ ಶಂಕರನಾರಾಯಣ ಕಡಮನ್ನಾಯ (ಕರ್ಕುಳ ಬೂಡು) ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಲೆಚಾಮುಂಡೇಶ್ವರಿ ಹಾಗೂ ಗುಳಿಗ ದೈವದ ಪ್ರತಿಷ್ಠಾ ಕಾರ್ಯಕ್ರಮವು ಮೇ.3ರಂದು ಬೆಳಿಗ್ಗೆ ಜರುಗಿತು.

ಮೇ.2ರಂದು ಸಂಜೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಖನನಾದಿ ಶುದ್ಧಿ, ಪ್ರಸಾದ ಶುದ್ಧಿ ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಮೇ.3ರಂದು ಬೆಳಿಗ್ಗೆ ಪುಣ್ಯಾಹ ಕಲಶ ಪ್ರತಿಷ್ಠೆ, ಗಣಪತಿ ಹೋಮ, ಪ್ರಧಾನ ಹೋಮ, ಕಲಶಾಭಿಷೇಕ, ಜೀವಕಲೆ ಪೂಜೆ, ಪೂರ್ವಾಹ್ನ 10.10ಕ್ಕೆ ಪ್ರತಿಷ್ಠೆ, ಅಲಂಕಾರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಜರುಗಿತು.
ಅಪರಾಹ್ನ ವಿವಿಧ ಆಹ್ವಾನಿತ ತಂಡಗಳಿಂದ ಭಜನಾ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.

ಮೇ.4ರಂದು ಬೆಳಿಗ್ಗೆ ಶ್ರೀ ಮಲೆ ಚಾಮುಂಡಿ ದೈವ ಹಾಗೂ ಗುಳಿಗ ದೈವದ ಕೋಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಗೌರವಾಧ್ಯಕ್ಷ ಶಿವರಾಮ ಬಿ.ಆರ್. ಅಧ್ಯಕ್ಷೆ ಶ್ರೀಮತಿ ರಮಾದೇವಿ ಕಳಗಿ, ಮೊಕ್ತೇಸರ ಮತ್ತಾಡಿ ಬಂಬ, ಕಾರ್ಯಾಧ್ಯಕ್ಷ ಸುರೇಶ್ ಪಿ.ಎಲ್. , ಕಾರ್ಯದರ್ಶಿ ಕೆ.ಕೆ. ರಮೇಶ, ಗೌರವ ಸಲಹೆಗಾರ ಬಿ.ಜೆ. ಯಶೋಧರ ಸೇರಿದಂತೆ ಸಮಿತಿಯ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ಸಮಿತಿ ಸದಸ್ಯರುಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.