ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಸಾಂಸ್ಜೃತಿಕ ಜಾಂಬೂರಿ ಕಾರ್ಯಕ್ರಮ

0

ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಪೋಷಕರ ಸಭೆ

ಸಂತ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಸುಳ್ಯ ಹಾಗೂ ಸೈಂಟ್ ಬ್ರೀಜಿಡ್ಸ್ ಹಿರಿಯ ಪ್ರಾಥಮಿಕ ಶಾಲೆ,ಸುಳ್ಯ ಇವರ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಬಗ್ಗೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಭೆಯು ಅ.31 ರಂದು ನಡೆಯಿತು.


ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ಇವರು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿದರು.


ಕಾರ್ಯಕ್ರಮದಲ್ಲಿ ವಂದನೀಯ ಫಾ| ವಿಕ್ಟರ್ ಡಿಸೋಜ ಶಾಲಾ ಸಂಚಾಲಕರು,ಚಂದ್ರಶೇಖರ ಬಿ. ಆರ್.ಪಿ ಸುಳ್ಯ,ಸಿ| ಬಿನೊಮಾ ಮುಖ್ಯ ಶಿಕ್ಷಕರು ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆ ಸುಳ್ಯ,ಸಿ| ಅಂತೋನಿ ಮೇರಿ ಮುಖ್ಯ ಶಿಕ್ಷಕರು ಸೈಂಟ್ ಬ್ರಿಜಿಡ್ಸ್ ಅ. ಹಿ.ಪ್ರಾ.ಶಾಲೆ ಸುಳ್ಯ,ಮತ್ತು ಸಿ|ಗ್ರೇಸಿ,ಭಾನುಪ್ರಕಾಶ್ ,ಉಮೇಶ್,ಅನಿತಾ ಮಸ್ಕರೇನಸ್ ,ಪುಷ್ಪವೇಣಿ ಸಭೆಯಲ್ಲಿ ಉಪಸ್ಥಿತರಿದ್ದರು
150 ಕ್ಕಿಂತ ಹೆಚ್ಚು ಪೋಷಕರು ಸಭೆಯಲ್ಲಿ ಭಾಗವಹಿಸಿದರು.