ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ನಾಪತ್ತೆ ಪ್ರಕರಣ

0

5 ದಿನ ಕಳೆದರೂ ಪತ್ತೆಯಾಗದ ಭಾರತಿ

ಸುಬ್ರಹ್ಮಣ್ಯದ ಗ್ರಾ.ಪಂ ಸದಸ್ಯೆ, ಐನೆಕಿದು ಗ್ರಾಮದ ಭಾರತಿಯವರು ಕಾಣೆಯಾಗಿ ಇಂದಿಗೆ 5 ದಿನ ಕಳೆದರೂ ಪತ್ತೆಯಾಗಿಲ್ಲ. ದೂರದ ಸಂಬಂಧಿ ಪುತ್ತೂರು ತಾಲೂಕಿನ ಈಶ್ವರಮಂಗಳ ನಿವಾಸಿಯಾಗಿದ್ದು ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿರುವವನೊಂದಿಗೆ ತೆರಳಿರುವುದಾಗಿ ಹೇಳಲಾಗುತ್ತಿದೆ.

ಅ. 29 ರಂದು ಸಂಜೆ ಭಾರತಿಯವರ ಮನೆ ಬಳಿಗೆ ಕಾರಿನಲ್ಲಿ ಒಬ್ಬರು ಬಂದಿದ್ದು ಅವರೊಂದಿಗೆ ಹೋಗಿರುವುದಾಗಿ ನೋಡಿದವರಿದ್ದಾರೆ. ಕಾರು ಬಂದು ತೆರಳಿವುದು ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿದೆ ಎನ್ನಲಾಗಿದೆ . ಹಾಗೆ ತೆರಳಿದವರು ಬೆಂಗಳೂರಿಗೆ ತೆರಳಿರುವುದು ಮೊಬೈಲ್ ಲೊಕೇಶನ್ ಆಧಾರದಲ್ಲಿ ಗೊತ್ತಾಗಿದ್ದು, ಆಂದ್ರ ಪ್ರದೇಶಕ್ಕೂ ಹೋಗಿರುವ ಮಾಹಿತಿ ಬಂದಿರುವುದಾಗಿ ತಿಳಿದುಬಂದಿದೆ. ಸುಬ್ರಹ್ಮಣ್ಯ ಠಾಣೆಯ ಎಸ್ ಐ ಖುದ್ದು ಬೆಂಗಳೂರಿನಲ್ಲಿದ್ದು ತನಿಖೆ ನಡೆಸುತಿರುವುದಾಗಿ ತಿಳಿದು ಬಂದಿದೆ.