ಕ.ಸಾ.ಪ. ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ

0

 

ಎನ್ನೆಂಸಿಯಲ್ಲಿ ದಿ.ಕುರುಂಜಿ ಮಹಾಲಿಂಗ ಮಾಸ್ತರ್ ದತ್ತಿನಿಧಿ ಉಪನ್ಯಾಸ
ಕನ್ನಡ ಸಾಹಿತ್ಯ ಪರಿಷತ್ತ್ ಸುಳ್ಯ ತಾಲೂಕು ಘಟಕ, ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ನೆಹರು ಮೆಮೋರಿಯಲ್ ಕಾಲೇಜು, ಕನ್ನಡ ವಿಭಾಗ, ಕನ್ನಡ ಸಂಘ ಮತ್ತು ಐಕ್ಯುಎಸಿ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದಿ. ಮಹಾಲಿಂಗ ಮಾಸ್ತರ್ ದತ್ತಿನಿಧಿ ಉಪನ್ಯಾಸ ನ. 4 ರಂದು ಎನ್ ಎಂ ಸಿ ಯಲ್ಲಿ ನಡೆಯಿತು.

 

 


ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಶ್ರೀಮತಿ ಮೀನಾಕ್ಷಿ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು.ಜನಪದ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಕುರಿತು ನಿವೃತ್ತ ಶಿಕ್ಷಕ ಶಿವಣ್ಣ ಕೊಳ್ಳೆಗಾಲ ಉಪನ್ಯಾಸ ನೀಡಿದರು. ಎನ್ಎಂಸಿಯ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡ,ಪ್ರಾಂಶುಪಾಲರಾದ ರುದ್ರ ಕುಮಾರ್ ಎಂ.ಎಂ.,ಕ.ಸಾ‌.ಪ.ನಿರ್ದೇಶಕರಾದ ಪೊ.ಸಂಜೀವ ಕುದ್ಪಾಜೆ,ಗೌರವ ಕೋಶಾಧಿಕಾರಿ ದಯಾನಂದ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಪೇರಾಲು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಕ.ಸಾ.ಪ.ನಿರ್ದೇಶಕರಾದ ರಮೇಶ್ ನೀರಬಿದಿರೆ ವಂದಿಸಿದರು. ನಿರ್ದೇಶಕಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ಕ.ಸಾ.ಪ.ಮಾಜಿ ಗೌರವ ಕಾರ್ಯದರ್ಶಿ ಗಣೇಶ್ ಭಟ್, ಉಪನ್ಯಾಸಕಿ ಡಾ. ಅನುರಾಧ ಕುರುಂಜಿ, ಕಸಾಪ ನಿರ್ದೇಶಕ ಜಯರಾಮ ಶೆಟ್ಟಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.