ಆಟೋಮೊಬೈಲ್ ಡಿಪ್ಲೋಮಾ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ನಿಖಿಲ್ ವಸಂತ್‌ಕುಮಾರ್ ರಾಜ್ಯಕ್ಕೆ ಮೂರನೇ ರ್‍ಯಾಂಕ್

0

 

2021- 22 ನೇ ಸಾಲಿನ ಆಟೋಮೊಬೈಲ್ ಡಿಪ್ಲೋಮಾ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ನಿಖಿಲ್ ವಸಂತ್‌ಕುಮಾರ್ ಇವರು ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದಿರುತ್ತಾರೆ.

ಇವರು ಬೆಂಗಳೂರಿನ ಆಕ್ಸ್‌ಫೋರ್‍ಡ್ ಪಾಲಿಟೆಕ್ನಿಕ್ ಬೆಂಗಳೂರು ಇಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದಿದ್ದು, ಒಟ್ಟು 1375 ಅಂಕಗಳಿಗೆ 1261 ಅಂಕಗಳನ್ನು ಗಳಿಸಿರುತ್ತಾರೆ. ಇವರು ಕಲ್ಲುಗದ್ದೆ ಶೇಷಪ್ಪ ಮಾಸ್ತರ್‌ರವರ ಪುತ್ರ ವಸಂತಕುಮಾರ್ ಹಾಗೂ ಶಶಿಕಲಾ ದಂಪತಿಗಳ ಪುತ್ರನಾಗಿದ್ದು ಸದ್ಯ ಬೆಂಗಳೂರಿನ ಜೆ.ಪಿ ನಗರದಲ್ಲಿ ವಾಸವಾಗಿದ್ದಾರೆ.