ಅಡ್ಕಾರ್ ಅಪಘಾತ : ಗಂಭೀರ ಗಾಯಗೊಂಡ ಬೈಕ್ ಸವಾರ ಮೃತ್ಯು

0

ನಿನ್ನೆ ರಾತ್ರಿ ಜಾಲ್ಸೂರು ಗ್ರಾಮದ ಅಡ್ಕಾರ್ ನಲ್ಲಿ ಬಸ್ – ಬೈಕ್ ಮಧ್ಯೆ ನಡೆದ ಅಪಘಾತ ದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

 

ಅಪಘಾತ ದಲ್ಲಿ ಗಂಭೀರಗೊಂಡ ಬೈಕ್ ಸವಾರ ಬೆಳ್ಳಾರೆ ಗ್ರಾಮದ ನೆಟ್ಟಾರು ಬೊಳಿಯಮೂಲೆ ರಾಮಣ್ಣ ಮೂಲ್ಯರವರ ಪುತ್ರ ರೋಹಿತ್ ರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಬಳಿಕ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ರೋಹಿತ್ ತಡರಾತ್ರಿ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಇವರಿಗೆ 31 ವರ್ಷ ಪ್ರಾಯ. ತಂದೆ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.