ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ವತಿಯಿಂದ ಮನೆ ಪೂರ್ಣಗೊಳಿಸಲು ನೆರವು

0

 

ಬೇಕಾದವರು ಸಂಪರ್ಕಿಸಲು ಆಹ್ವಾನ

ಮನೆ ನಿರ್ಮಿಸಿ ಆರ್ಥಿಕ ಅಡಚಣೆಯಿಂದ ಪೂರ್ಣಗೊಳಿಸಲು ಸಾಧ್ಯವಾಗದೆ ಬಾಕಿಯಾಗಿರುವ ಒಬ್ಬ ಬಡವರಿಗೆ ಮನೆ ಪೂರ್ಣಗೊಳಿಸುವುದಕ್ಕಾಗಿ ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯಿಂದ ಒಂದು ಲಕ್ಷ ರೂ. ನೆರವು ನೀಡಲು ನಿರ್ಧರಿಸಲಾಗಿದ್ದು, ಅವಶ್ಯಕತೆ ಉಳ್ಳವರು ಕೂಡಲೇ ಸಂಪರ್ಕಿಸಲು ಕೋರಲಾಗಿದೆ.
ಅರ್ಜಿದಾರರು ಸುಳ್ಯ ತಾಲೂಕಿನವರಾಗಿರಬೇಕು. ಒಂದು ಲಕ್ಷ ದೊರೆತರೆ ಡಿಸೆಂಬರ್ 20 ರೊಳಗೆ ಮನೆ ಪೂರ್ತಿಗೊಳಿಸಿ ಡಿ.26 ರೊಳಗೆ ಗೃಹಪ್ರವೇಶ ಮಾಡುವವರಾಗಿರಬೇಕು.
ಸಂಪರ್ಕಿಸಬೇಕಾದ ವಿಳಾಸ : ದೊಡ್ಡಣ್ಣ ಬರೆಮೇಲು ಅಧ್ಯಕ್ಷರು, ಕೆ.ವಿ.ಜಿ.ಸುಳ್ಯ ಹಬ್ಬ ಸಮಿತಿ. ಫೋನ್ : 9449662384

ಹರೀಶ್ ಬಂಟ್ವಾಳ್ ಸಂಚಾಲಕರು, ಸಮಾಜ ಸೇವಾ ಕಾರ್ಯವಿಭಾಗ, ಕೆ.ವಿ.ಜಿ.ಸುಳ್ಯ ಹಬ್ಬ ಸಮಿತಿ. ಫೋನ್ : 9449103555