ಕೋಲ್ಚಾರು ಪರಿಸರದ ಮನೆ ಮನೆಗಳಲ್ಲಿ ನಗರ ಭಜನೆ ಆರಂಭ -ಮನೆಗೊಂದು ಭಗವದ್ಗೀತೆ ಪುಸ್ತಕ ವಿತರಣೆ

0

ಕೋಲ್ಚಾರು
ಶ್ರೀ ಶಾರದಾಂಬಾ ಭಜನಾ‌ ಮಂದಿರದ ವತಿಯಿಂದ ವರ್ಷಂಪ್ರತಿಯಂತೆ ನಗರ ಭಜನೆಯನ್ನು ನ.5 ರಂದು ಪ್ರಾರಂಭಿಸಲಾಯಿತು.


ಮಂದಿರದ ಅಧ್ಯಕ್ಷ ಯತಿರಾಜ್ ಕೊಯಿಂಗಾಜೆ ಯವರ ನೇತೃತ್ವದಲ್ಲಿ ಕೋಲ್ಚಾರು ಪರಿಸರದ ಸುಮಾರು 230 ಮನೆಗಳಲ್ಲಿ ಎರಡು ತಿಂಗಳ ಕಾಲ ನಿರಂತರ ವಾಗಿ ಸಂಧ್ಯಾ ಕಾಲದಲ್ಲಿ ಭಜನೆಯು ಮನೆ ಮನೆಗಳಲ್ಲಿ ನಡೆಯಲಿದೆ. ಮಂದಿರದ ಎಲ್ಲಾ ಸದಸ್ಯರು ಹಾಗೂ ಸ್ಥಳೀಯ ಮಕ್ಕಳು ದಿನಂಪ್ರತಿ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಪ್ರತೀ ಮನೆಗೂ ಮಂದಿರದ ವತಿಯಿಂದ ಭಗವದ್ಗೀತೆಯ ಪುಸ್ತಕವನ್ನು ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.