ನ. 8: ಚಂದ್ರಗ್ರಹಣದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆ, ಭೋಜನವಿಲ್ಲ, ದೇವರ ದರ್ಶನ ಸಮಯ ಬದಲಾವಣೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂದ್ರಗ್ರಹಣದ ದಿನವಾದ ನ.8ರಂದು ಯಾವುದೇ ಸೇವೆಗಳು ನೆರವೇರುವುದಿಲ್ಲ‌. ಅಲ್ಲದೆ ಭೋಜನ ಪ್ರಸಾದ ವಿತರಣೆ ಕೂಡಾ ಇರುವುದಿಲ್ಲ.
ಆದರೆ ದೇವರ ದರುಶನದ ಸಮಯದಲ್ಲಿ ವ್ಯತ್ಯಯಗಳನ್ನು ಮಾಡಲಾಗಿದೆ. ಬೆಳಗ್ಗೆ 9ಗಂಟೆಯಿಂದ 11.30ರ ತನಕ, ಮಧ್ಯಾಹ್ನ 2.39ರಿಂದ 6.19ರ ತನಕ, ಹಾಗೂ ರಾತ್ರಿ 7.30ರಿಂದ 9 ರ ತನಕ ಶ್ರೀ ದೇವರ ದರುಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ. ಗ್ರಹಣ ಸ್ಪರ್ಶ ಅಪರಾಹ್ನ 2.39 ಆರಂಭವಾಗಿ ಸಂಜೆ 6.19 ಗ್ರಹಣ ಮೊಕ್ಷಕಾಲ ವಾಗಿರುತ್ತದೆ.