ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಏಕಾದಶಿ ಭಜನಾ ಕಾರ್ಯಕ್ರಮ

0

ಬೆಳ್ಳಾರೆಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನ. 4ರಂದು ಏಕಾದಶಿ ಭಜನಾ ಕಾರ್ಯಕ್ರಮ ನಡೆಯಿತು. ಉಬರಡ್ಕ ಮಹಿಳಾ ಭಜನಾ ತಂಡ ಮತ್ತು ಹರಿಹರೇಶ್ವರ ಭಜನಾ ತಂಡ ಹರಿಹರ ತಂಡಗಳ ಸದಸ್ಯರು ಭಜನಾ ಸಂಕೀರ್ತನೆ ನಡೆಸಿದರು. ದೇವಸ್ಥಾನದ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಶ್ಯಾನುಭಾಗ್ ಮತ್ತಿತರರ ಮೊಕ್ತೇಸರರು, ಕೊಡಿಯಾಲ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿಯ ಅಧ್ಯಕ್ಷ ಬಾಚೋಡಿ ವೆಂಕಟೇಶ ಪೈ ಸೇರಿದಂತೆ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.