ಅರಂತೋಡು : ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯ ಪ್ರಯುಕ್ತ ಸುಳ್ಯ ತಾಲ್ಲೂಕಿನ ಸಹಕಾರಿಗಳಿಗಾಗಿ ಕ್ರೀಡೋತ್ಸವ

0


ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಶ್ರಯದಲ್ಲಿ 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯ ಸಲುವಾಗಿ ಸುಳ್ಯ ತಾಲ್ಲೂಕಿನ ಸಹಕಾರಿಗಳಿಗಾಗಿ ಪ್ರಥಮವಾಗಿ ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನ.11 ರಂದು ನಡೆಯಿತು.

.ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಹಿಸಿದರು.ಕೆವಿಜಿ ಆರ್ಯುವೇದ ವಿಶ್ವವಿದ್ಯಾಲಯ ಪ್ರಾಂಶುಪಾಲ ಡಾ.ಡಿ.ವಿ.ಲೀಲಾಧರ ದ್ವೀಪ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು .ಕ್ರಿಕೆಟ್ ಪಂದ್ಯ ವನ್ನು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ ಚಾಲನೆ ನೀಡಿದರು.ಪಂದ್ಯಾಟದ ಕ್ರೀಡಾಂಗಣ ವನ್ನು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್ ಎಸ್ ಉದ್ಘಾಟಿಸಿದರು .

ಹಗ್ಗ ಜಗ್ಗಾಟದ ಪಂದ್ಯ ಉದ್ಘಾಟನೆಯನ್ನು ಟಿ.ಎ.ಪಿ.ಸಿ.ಎಮ್.ಎಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಚಾಲನೆ ನೀಡಿದರು.ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ.ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ,ಗ್ರಾ.ಪಂಚಾಯತ್ ಉಪಾಧ್ಯಕ್ಷೆ ಶ್ವೇತಾ ,ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಶಿವಾನಂದ ಕುಕ್ಕುಂಬಳ,ಪುಷ್ಪಾಧರ,ಶ್ರೀ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ವಿನೋದ್ ಹಲಸಿನಡ್ಕ ಉಪಸ್ಥಿತರಿದ್ದರು .

ಮ್ಯಾನೇಜರ್ ಪ್ರದೀಪ್ ಸ್ವಾಗತಿಸಿ ಕಾರ್ಯಕ್ರಮ ವನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಾಸುದೇವ ನಾಯಕ್ ನಿರೂಪಿಸಿದರು.