ಸ್ನೇಹದಲ್ಲಿ ಕನಕ ಜಯಂತಿ ಆಚರಣೆ, ಜಾತಿ ಮತದ ಭೇದ ಬೇಡ ಮಾನವರೆಲ್ಲರೂ ಒಂದೇ : ಜಯಲಕ್ಷ್ಮಿ ದಾಮ್ಲೆ

0

     "15-16ನೇ ಶತಮಾನದ ದಾಸ ಶ್ರೇಷ್ಠರಲ್ಲಿ ಕನಕದಾಸರು ಒಬ್ಬರು. ಕುಲ-ಜಾತಿಯ ಬಗ್ಗೆ ಮೂಢನಂಬಿಕೆ ಕಂದಾಚಾರ ವಿದ್ದ ಕಾಲದಲ್ಲಿ ಮಾನವ ಜಾತಿಯೊಂದೇ ಎಂಬುದನ್ನು ಸಾರಿ ಹೇಳಿದವರು ಕನಕದಾಸರು. ಇವರು ವ್ಯಾಸರಾಯರ ಪರಮಶಿಷ್ಯರಾಗಿದ್ದರು. ಕುರುಬ ಜಾತಿಗೆ ಸೇರಿದ ಕನಕದಾಸರು ಸೈನಿಕ ದಂಡನಾಯಕರಾಗಿ ಯುದ್ಧವನ್ನು ನೋಡಿ ವೈರಾಗ್ಯ ಹೊಂದಿ ದೇವರ ಆರಾಧನೆ ಪ್ರಾರಂಭಿಸಿದರು. ಕಾಗಿ ನೆಲೆಯ ಆದಿಕೇಶವ ಎಂಬ ಅಂಕಿತನಾಮದಿಂದ ಕೀರ್ತನೆಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದರು. ಕನಕದಾಸರು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾಗಿದ್ದು, ಉಡುಪಿಯ ಶ್ರೀ ಕೃಷ್ಣನ ಪರಮ ಭಕ್ತರಾಗಿದ್ದರು. ಅವರು ಜಾತಿ- ಮತದ ಭೇದ ಬೇಡ, ಮಾನವರೆಲ್ಲರೂ ಒಂದೇ ಎಂದು ತಮ್ಮ ಕೀರ್ತನೆಗಳ ಮೂಲಕ ಜಗತ್ತಿಗೆ ಸಾರಿ ಹೇಳಿದರು" ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಹೇಳಿದರು. 

ಅವರು ನ.11ರಂದು ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ನಂತರ ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಹಾಡಿದರು.

ಸಂಸ್ಥೆಯ ಶಿಕ್ಷಕರಾದ ದೇವಿಪ್ರಸಾದ ಜಿ.ಸಿ. ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.