ಸುಳ್ಯದಲ್ಲಿ ನಡೆಯಲಿರುವ ಗ್ರಾಮೀಣ ಕ್ರೀಡಾಕೂಟ

0

ಕರ್ನಾಟಕ ಸರಕಾರ ಯುವ ಸಬಲೀಕರಣ ಕ್ರೀಡಾ ಇಲಾಖೆಯ ವತಿಯಿಂದ ನಡೆಯುವ ಗ್ರಾಮೀಣ ಕ್ರೀಡಾ ಕೂಟಗಳಾದ ಕಬಡ್ಡಿ ಮತ್ತು ಖೋಖೊ ಪಂದ್ಯಾಟಗಳು ಪುರುಷರಿಗೆ ಮತ್ತು ಮಹಿಳೆಯರಿಗೆ ನ.20 ರಂದು ಅರಂತೋಡಿನ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು, ನ.22 ರಂದು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್, ನ.24 ರಂದು ಗುತ್ತಿಗಾರು ಸ.ಹಿ.ಪ್ರಾ ಶಾಲೆ, ನ.28 ರಂದು ಪಂಜ ಸ.ಪ.ಪೂ ಕಾಲೇಜು, ನ.30 ರಂದು ಸರಕಾರಿ ಪ್ರೌಢಶಾಲೆ ಅಡ್ಪಂಗಾಯ,ಅಜ್ಜಾವರ ಶಾಲೆಯಲ್ಲಿ ನಡೆಯಲಿದೆ. ಮುಕ್ತ ಸ್ಪರ್ಧೆಯಾಗಿರುವುದರಿಂದ ಆಯಾ ಗ್ರಾಮ ಪಂಚಾಯತ್ ಸಂಬಂಧಿಸಿದವರೇ ಸ್ಪರ್ಧಿಸಬೇಕು. ಉಳಿದವರಿಗೆ ಭಾಗವಹಿಸಲು ಅವಕಾಶವಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಮತ್ತು ತಾಲೂಕು ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ ತಿಳಿಸಿದ್ದಾರೆ.