ಅಡ್ಕಾರು: ಅಯ್ಯಪ್ಪ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ವತಿಯಿಂದ ಡಿಸೆಂಬರ್ 15ರಂದು ಜರುಗಲಿರುವ ಪ್ರತಿಷ್ಠಾ ವಾರ್ಷಿಕೋತ್ಸವದ ಕುರಿತು ಪೂರ್ವಭಾವಿ ಸಭೆಯು ಅಯ್ಯಪ್ಪ ಮಂದಿರದ ವಠಾರದಲ್ಲಿ ನ.13ರಂದು ಜರುಗಿತು.


ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಅಡ್ಕಾರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದಂದು ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.


ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ನಾರಾಯಣ ಮಡಿವಾಳ ಅಡ್ಕಾರು, ಉತ್ಸವ ಸಮಿತಿ ಅಧ್ಯಕ್ಷ ಉದಯ ಮಣಿಯಾಣಿ ಪದವು, ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮನು ಪದವು, ಚಂದ್ರಶೇಖರ ಎ.ಎಸ್. ಅಡ್ಕಾರು ಹರೀಶ್ ಕಲ್ಲಡ್ಕ, ಸುಖೇಶ್ ಅಡ್ಕಾರುಪದವು, ಅಖಿಲೇಶ್ ಅಡ್ಕಾರು, ಸಂತೋಷ್ ಕುಮಾರ್ ಅಡ್ಕಾರು, ಯತೀಶ ವಿನೋಬನಗರ, ಚಂದ್ರಶೇಖರ (ಪುಟ್ಟು) ಅಡ್ಕಾರು, ಎ.ಆರ್. ಗಂಗಾಧರ ಅಡ್ಕಾರು, ಎ.ಆರ್. ಬಾಬು ಅಡ್ಕಾರು, ಹರೀಶ್ ಪದವು, ಶ್ರೀಕಾಂತ್ ಅಡ್ಕಾರುಬೈಲು, ನಿರಂಜನ ಅಡ್ಕಾರು, ಶರತ್ ಪದವು, ಉದಯಪೂಜಾರಿ ಅಡ್ಕಾರು, ರಕ್ಷಿತ್ ಪದವು ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.