ಬಳ್ಪದಲ್ಲಿ ಶಿಶುಮಂದಿರ ಲೋಕಾರ್ಪಣೆ, ವಸತಿ ಹಸ್ತಾಂತರ, ಸತ್ಯನಾರಾಯಣ ಪೂಜೆ

0

ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ-ಕೇನ್ಯ ಇದರ ಆಶ್ರಯದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಶ್ರೀರಾಮ ಶಿಶು ಮಂದಿರದ ಲೋಕಾರ್ಪಣೆ, ವಸತಿ ಹಸ್ತಾಂತರ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನ. 14ರಂದು ಬಳ್ಪದ ಎಡೋಣಿಯ ವಿಕಾಸಪುರದಲ್ಲಿ ನಡೆಯಿತು. ಬೆಳಿಗ್ಗೆ ಪುರೋಹಿತರಾದ ರಘುರಾಮ ಅಮ್ಮಣ್ಣಾಯರ ನೇತೃತ್ವದಲ್ಲಿ ಗಣಹೋಮ ಬಳಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

ಭಾರತ ಮಾತೆಯ ಭಾವಚಿತ್ರಕ್ಕೆ ದೀಪಬೆಳಗಿಸಿ ಪುಷ್ಪಾರ್ಚನೆಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್. ‌ಅಂಗಾರ ಶಿಶು ಮಂದಿರವನ್ನು ದೀಪ ಬೆಳಗಿಸಿ ಲೋಕಾರ್ಪಣೆ ಮಾಡಿದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಹ ಸೇವಾ ಪ್ರಮುಖ್ ನ. ಸೀತಾರಾಮ ಮುಖ್ಯ ಭಾಷಣ ಮಾಡಿದರು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ‌‌. ತೀರ್ಥರಾಮ, ಬಳ್ಪ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸೂಂತಾರು, ಪ್ರಗತಿಪರ ಕೃಷಿಕರಾದ ಶ್ರೀಮತಿ ಮಮತಾ ಎಸ್. ‌ಶೆಟ್ಟಿ ಶಾರದಾ ಗಾರ್ಡನ್, ಬೆಂಗಳೂರಿನ ಖ್ಯಾತ ಜ್ಯೋತಿಷಿ ಡಾ. ಶ್ರೀನಿವಾಸ ಗುರೂಜಿ, ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಭಾರತ್, ಸುಳ್ಯ ತಾಲೂಕು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ತಾಲೂಕು ಸಂಘ ಚಾಲಕರಾದ ಚಂದ್ರಶೇಖರ ತಳೂರು, ಗ್ರಾಮವಿಕಾಸ ವಿಭಾಗ ಸಂಯೋಜಕರಾದ ಜಿತೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ ಕೇನ್ಯ ಇದರ ಅಧ್ಯಕ್ಷ ವಿನೋದ್ ಬೊಳ್ಮಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಪ್ರತಿಷ್ಠಾನದ ಸದಸ್ಯ ರವಿಕುಮಾರ್ ನರಿಯೂರು ವಂದಿಸಿದರು. ತೀರ್ಥಾನಂದ ಕೊಡೆಂಕಿರಿ ಕಾರ್ಯಕ್ರಮ ನಿರೂಪಿಸಿದರು.

ಶ್ರೀಮತಿ ವಿದ್ಯಾ ಪಠೋಳಿ ಪ್ರಾರ್ಥಸಿದರು.