ಅರಂತೋಡು ತೆಕ್ಕಿಲ್ ಸೋಕರ್ ಫುಟ್ ಬಾಲ್ ಪಂದ್ಯಾಟ ರೋಯಲ್ ಕಲ್ಲುಗುಂಡಿ ಪ್ರಥಮ, ಬೆಟಾಲಿಯನ್ ಎಫ್.ಸಿ. ಅರಂತೋಡು ರನ್ನರ್ಸ್

0

ಬೆಟಾಲಿಯನ್ ಎಫ್.ಸಿ ಹಾಗೂ ತೆಕ್ಕಿಲ್ ಪ್ರತಿಷ್ಠಾನ ಅರಂತೋಡು ಇದರ ಜಂಟಿ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಆಹ್ವಾನಿತ ತಂಡದ ಲೀಗ್ ಫುಟ್ಬಾಲ್ ಪಂಧ್ಯಾವಳಿಯಲ್ಲಿ ಲೋಯಲ್ ಕಲ್ಲುಗುಂಡಿ ಪ್ರಥಮ ಸ್ಥಾನ ಹಾಗೂ ಅರಂತೋಡು ಬೆಟಾಲಿಯನ್ ಎಫ್ .ಸಿ ರನ್ನರ್ಸ್ ಸ್ಥಾನವನ್ನು ಪಡೆಯಿತು.


ರೋಮಾಂಚಕಾರಿಯಾಗಿ ನಡೆದ ಫೈನಲ್ ಪಂದ್ಯದಲ್ಲಿ ರೋಯಲ್ ಕಲ್ಲುಗುಂಡಿ ತಂಡವು, ಬೆಟಾಲಿಯನ್ ಅರಂತೋಡು ಎಫ್.ಸಿ ತಂಡವನ್ನು 1-0 ಗೋಲಿನಿಂದ ಸೋಲಿಸಿ ಪ್ರಥಮ ಬಹುಮಾನ ರೂ.4044 ನಗದು ಮತ್ತು ತೆಕ್ಕಿಲ್ ಟ್ರೋಪಿಯನ್ನು ಪಡೆಯಿತು, .

ದ್ವಿತೀಯ ಬಹುಮಾನ ರೂ.2022 ಮತ್ತು ತೆಕ್ಕಿಲ್ ಟ್ರೋಪಿಯನ್ನು ಬೆಟಾಲಿಯನ್ ಎಫ್.ಸಿ ತನ್ನದಾಗಿಸಿ ಕೊಂಡಿತು. ಬಹುಮಾನವನ್ನು ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ ವಿತರಿಸಿ ಫುಟ್ಬಾಲ್ ಆಟ ಆಡುವಷ್ಟು ಸೌಲಭ್ಯಗಳು ನಮ್ಮ ಗ್ರಾಮದಲ್ಲಿ ಇಲ್ಲದಿದ್ದರೂ ಇಂಥಹ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ರೀತಿಯಲ್ಲಿ ಪಂದ್ಯಾಟವನ್ನು ಸಂಘಟಿಸಿರುವುದು ಅಭಿನಂದನೀಯ. ಅದ್ನಾನ್ ಪಟೇಲ್ ನಂತಹ ಫುಟ್ ಬಾಲ್ ಪ್ರತಿಭೆ ರಾಜ್ಯ ಮಟ್ಟದಲ್ಲಿ ಆಡುತ್ತಿರುವುದು ನಮ್ಮೂರಿಗೆ ಹೆಮ್ಮೆ ಎಂದರು.


ಅಧ್ಯಕ್ಷತೆಯನ್ನು ವಹಿಸಿದ ಸಂಪಾಜೆ ಗ್ರಾಮ ಪಂಚಾಯತ್ ಜಿ.ಕೆ ಹಮೀದ್ ಗೂನಡ್ಕ ಮಾತನಾಡಿ ಇಲ್ಲಿನ ಯುವ ಪ್ರತಿಭೆಗಳು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಅದಕ್ಕೆ ಎ.ಸಿ.ವಸಂತರಂತಹ ದೈಹಿಕ ಶಿಕ್ಷಕರ ಶ್ರಮ ಅಪಾರ ಎಂದರು.
ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಉಸ್ತುವಾರಿ ಕೃಷ್ಣಪ್ಪ, ನಿವೃತ್ತ ದೈಹಿಕ ಶಿಕ್ಷಣ ಅಧ್ಯಾಪಕ ಎ.ಸಿ ವಸಂತ, ಕರ್ನಾಟಕ ಕಾಂಗ್ರೇಸ್ ಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿ ಅಬೂಸಾಲಿ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ,ಗ್ರಾಮ ಪಂಚಾಯತ್ ಸದಸ್ಯ ಪುಷ್ಪಾಧರ ಕೊಡಂಕೇರಿ, ಯುವ ಉಧ್ಯಮಿ ಸೈಪುದ್ಧೀನ್ ಪಠೇಲ್, ಜೆ.ಡಿ.ಎಸ್. ಮುಖಂಡ ಹನೀಫ್ ಮೊಟ್ಟೆಂಗಾರ್, ಸಾಮಾಜಿಕ ಕಾರ್ಯಕರ್ತ ತಾಜುದ್ಧೀನ್ ಅರಂತೋಡು, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಹೀಮ್ ಬೀಜದಕಟ್ಟೆ, ಜಿಲ್ಲಾ ಎಸ್.ಎಸ್.ಯು.ಐ ಕಾರ್ಯದರ್ಶಿ ಉಬೈಸ್ ಗೂನಡ್ಕ, ಶೈನ್ ತೆಕ್ಕಿಲ�