ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಮಾಹಿತಿ ಶಿಬಿರ

0

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿರುವ ‘ನಾವು ಸೇವೆ ಮಾಡಲು ಕಲಿಯುತ್ತೇವೆ (We learn to serve) ಎಂಬ ಧೈಯವಾಕ್ಯದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತರಬೇತಿ ಕಾರ್ಯಗಾರವನ್ನು ಸುಳ್ಯ ಅರಂತೋಡು ನೆಹರು ಮೆಮೋರಿಯಲ್ ಕಾಲೇಜು ವಠಾರದಲ್ಲಿ ಅಕ್ಟೋಬರ್ 14ರಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲಾ ವ್ಯಾಪ್ತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರುಗಳ
ಜೀವನದಲ್ಲಿ ಹೊಸ ಅಧ್ಯಾಯ ರೂಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಈ ಯೋಜನೆಯಡಿಯಲ್ಲಿ ಒಟ್ಟು 17 ಶಾಲೆಗಳನ್ನು ಗುರುತಿಸಲಾಗಿದ್ದು ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ಮೆಮೋರಿಯಲ್ ಕಾಲೇಜು ಒಳಗೊಂಡಿರುತ್ತದೆ.

ಪ್ರತಿಯೊಂದು ಶಾಲೆಯಲ್ಲಿ 8 ಮತ್ತು 9 ನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದರ ಫಲಾನುಭವಿಗಳಾಗಿರುತ್ತಾರೆ. ಈ ಕಾರ್ಯಗಾರದಲ್ಲಿ ಮಕ್ಕಳ
ಹಕ್ಕುಗಳು ಮತ್ತು ಮಕ್ಕಳಿಗೆ ಸಂಬಂಧದ ಕಾನೂನುಗಳ ಕುರಿತು ಅರಿವು ಹಾಗೂ ಕವಾಯತಿನ ಬೋಧನೆ
ನೀಡಲಾಗುತ್ತದೆ. ಸರ್ಕಾರದ ವಿವಿಧ ಸಂಘ ಸಂಸ್ಥೆಗಳ ಭೇಟಿಯನ್ನು ಏರ್ಪಡಿಸುವ ಮೂಲಕ ಇಲಾಖೆ ಸಂಸ್ಥೆಗಳ
ಕಾರ್ಯನಿರ್ವಹಣಾ ಪ್ರಕ್ರಿಯೆಯ ಕುರಿತಂತೆ ಅರಿವು ಮೂಡಿಸಲಾಗುತ್ತದೆ.
ಹಾಗೂ ಮಕ್ಕಳಿಗೆ ನಾಗರಿಕರ
ರಕ್ಷಣೆ,ಅಪರಾದ ನಿಯಂತ್ರಣೆ, ವಿಪತ್ತು ನಿರ್ವಹಣೆಯ ಕುರಿತಂತೆ ತರಬೇತಿ ನೀಡಲಾಗುತ್ತದೆ. ಪೊಲೀಸ್ ಸ್ಕೂಡೆಂಟ್ ಕೆಡಿಟ್
ಯೋಜನೆಯ ಮಕ್ಕಳಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ, ಸಾಮಾಜಿಕ
ಸಮಸ್ಯೆಗಳ ನಿರ್ವಹಣಾ ಕೌಶಲ್ಯ,ಸಹಾನುಭೂತಿ, ಶಿಸ್ತುಬದ್ಧ ಜೀವನವನ್ನು ಅಳವಡಿಸುವಲ್ಲಿ ಪ್ರಮುಖ
ಪಾತ್ರವನ್ನು ಈ ಕಾರ್ಯಗಾರದಿಂದ ವಿದ್ಯಾರ್ಥಿಗಳಿಗೆ ಲಭಿಸಲಿದೆ. ಯೋಜನೆಯ ವಿಶೇಷ ಅಂಗವಾಗಿ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ
ವಿದ್ಯಾರ್ಥಿಗಳ ಆತ್ಮರಕ್ಷಣಾ ಕೌಶಲ್ಯ ತರಬೇತಿಯಡಿ ವಿಶೇಷ ಕಾಳಜಿ ವಹಿಸಲಾಗುವುದು ಎಂದು ಕಾರ್ಯಗಾರದ ಮುಖ್ಯಸ್ಥರಾಗಿದ್ದ ಸುಳ್ಯ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್ ಐ ರತ್ನ ಕುಮಾರ್ ತಿಳಿಸಿದ್ದಾರೆ.
ಈ ಕಾರ್ಯಗಾರವು ಪ್ರತಿವಾರಗಳಲ್ಲಿ ಒಂದು ದಿನ ಶಾಲೆಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿಗಳು, ಶಾಲಾ ಶಿಕ್ಷಕವೃಂದದವರು ಉಪಸ್ಥಿತರಿದ್ದರು.