ಅಂಜಲಿ ಮೊಂಟೆಸರಿ ಪ್ಲೇ ಸ್ಕೂಲ್ ನಲ್ಲಿ ಮಕ್ಕಳ ದಿನಾಚರಣೆ

0


ಅಂಜಲಿ ಮೊಂಟೆಸರಿ ಪ್ಲೇ ಸ್ಕೂಲ್ನಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ದ ಹೆಸರಾಂತ ಬಿಸಿನೆಸ್ ಮ್ಯಾನ್ ಹಾಗೂ ಆಕ್ಟಿವ್ ಮೆಂಬರ್ ಆಫ್ ಲಯನ್ಸ್ ಕ್ಲಬ್ ಶ್ರೀಯುತ ಎಸ್ ಆರ್ ಸುರಯ್ಯ ಸೋಂತುಡು ಅವರು ವಹಿಸಿದ್ದರು. ಮಕ್ಕಳ ದಿನಾಚರಣೆಯಂದು ಪುಟಾಣಿಗಳಿಗೆ ಅವಾರ್ಡ್ ಕೊಡುವುದರ ಮೂಲಕ ಗೌರವಿಸಲಾಯಿತು.ಸಂಸ್ಥೆ ವತಿಯಿಂದ ಮಕ್ಕಳಿಗೆ ಹಲವಾರು ಲಕ್ಕಿ ಗೇಮ್ಸ್ ಅನ್ನು ಆಯೋಜಿಸಲಾಗಿತ್ತು. ಕೇಕ್ ಕಟ್ ಮಾಡಿ ಸಿಹಿ ತಿಂಡಿ ಹಂಚಲಾಯಿತು.ಪೋಷಕರು ಮಕ್ಕಳಗಾಗಿ ಹಾಡನ್ನು ಹಾಡಿ ಸಂಭ್ರಮಿಸಿದರು. ಶಾಲೆ ಶಿಕ್ಷಕಿ ಕೌಶಲ್ಯ ರವರು ಪ್ರಾರ್ಥಿಸಿ ಸಂಸ್ಥೆಯ ಸಂಚಾಲಕರಾದ ಗೀತಾಂಜಲಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.