ಸುಳ್ಯ‌ ನಗರದ ಸಮೀಪ‌ ಕಾಡಾನೆ ಹಿಂಡು, ನಗರವಾಸಿಗಳಲ್ಲಿ ಹೆಚ್ಚಿದ ಆತಂಕ

0

ಕಾಡಾನೆಗಳ ಹಿಂಡು ಸುಳ್ಯ‌ ನಗರ ಸಮೀಪ ಹೊಳೆಯ ಇನ್ನೊಂದು ‌ಬದಿಯಲ್ಲಿದ್ದು, ಹೊಳೆ ದಾಟಿದರೆ ನಗರಕ್ಕೆ ಕಾಲಿಡಲಿದೆ. ಈ ಬಗ್ಗೆ ಸ್ಥಳೀಯರು ಆತಂಕಕ್ಕೀಡಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು‌ ನದಿ ತಟದಲ್ಲಿದ್ದು ಆನೆಯನ್ನು ಕಾಡಿಗಟ್ಟಿಸುವ ಪ್ರಯತ್ನದಲ್ಲಿ ತೊಡಗಿದೆ ಎಂದು ತಿಳಿದು ಬಂದಿದೆ.

ಮೂರು ಕಾಡಾನೆಗಳು ಕೆಲ ಸಮಯದಿಂದ ಅಜ್ಜಾವರ ಗ್ರಾಮದ ತುದಿಯಡ್ಕ ಇನ್ನಿತರ ಭಾಗದಲ್ಲಿ ಸುತ್ತಾಡುತ್ತಿದೆ. ನಿನ್ನೆ ಸುಳ್ಯ ನಗರದ ನೆಲ್ಲಿಬಂಗಾರಡ್ಕ, ಭಸ್ಮಡ್ಕ ಭಾಗದಲ್ಲಿ‌ ಹೊಳೆಯ ಒಂದು ಭಾಗದಲ್ಲಿ ಘೀಳಿಡುತ್ತಿದ್ದು, ನದಿ ದಾಟಿ ಬಂದಿಲ್ಲ. ಈ ಕುರಿತು ಮಾಹಿತಿ ಪಡೆದಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಭಸ್ಮಡ್ಕ, ನೆಲ್ಲಿಬಂಗಾರಡ್ಕ ಭಾಗಕ್ಕೆ ತೆರಳಿದ್ದು ಆನೆಗಳನ್ನು ಊರವರ ಸಹಕಾರದಿಂದ ಮೇಲೆ ಕಾಡಿಗೆ ಓಡಿಸಲು ಪ್ರಯತ್ನ ಪಡುತ್ತಿರುವುದಾಗಿ ತಿಳಿದುಬಂದಿದೆ.