ಬೆಳ್ಳಾರೆ ಜ್ಞಾನದೀಪದಲ್ಲಿ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರಿಗೆ ಕೌಶಲ್ಯ ಕಾರ್ಯಾಗಾರ
ಶಿಕ್ಷಕರ ಯಶಸ್ಸಿಗೆ ಕೌಶಲ್ಯ ಮುಖ್ಯ : ಬಿ. ವಿ. ಸೂರ್ಯ ನಾರಾಯಣ

0

ಶಿಕ್ಷಕರೆಂದರೆ ಜೀವನ ಪರ್ಯಂತ ಕಲಿಯುವವರು. ಬೋಧನೆಯಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಂಡು ಹೊಸತನ ರೂಪಿಸಿಕೊಂಡ ಶಿಕ್ಷಕರು ಯಶಸ್ವಿಯಾಗುತ್ತಾರೆ ಎಂದು ನಿವೃತ್ತ ಪ್ರಾಂಶುಪಾಲ ಬಿ. ವಿ ಸೂರ್ಯನಾರಾಯಣ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವತಿಯಿಂದ ಸಂಸ್ಥೆಯ ವಿದ್ಯಾರ್ಥಿ ಶಿಕ್ಷಕಿಯರಿಗೆ ನಡೆದ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ತರಬೇತಿ ನೀಡಿದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಗೀತಾ ಬಾಲಚಂದ್ರ, ಉಪನ್ಯಾಸಕಿ ಶೋಭಾ, ಬೆಳ್ಳಾರೆ ಕೆ.ಪಿ.ಎಸ್ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿ ಲಾವಣ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಗಣೇಶ್ ಪುತ್ತೂರು ಕಾರ್ಯಕ್ರಮ ನಿರ್ವಹಿಸಿದರು.