ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ ಸಪ್ತಾಹ ,ಪುಸ್ತಕ ಪ್ರದರ್ಶನ

0

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ರಾಜೀವ ಗಾಂಧಿ ಸೇವಾ ಕೇಂದ್ರ ಬೆಳ್ಳಾರೆಯಲ್ಲಿ ಪುಸ್ತಕ ಪ್ರದರ್ಶನ ಹಾಗೂ ಗ್ರಂಥಾಲಯದ ಬಳಕೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯವಾಗಿ ಶ್ರೀಮತಿ ಉಷಾ ಪ್ರಸಾದ್ ರೈ ವಲಯ ಮೇಲ್ವಿಚಾರಕರು ಸಮಗ್ರ ಶಿಶು ಅಭಿವೃದ್ದಿ ಯೋಜನೆ ಬೆಳ್ಳಾರೆ ವಲಯ ಇವರು ನ.16 ರಂದು ಮಾಹಿತಿ ನೀಡಿದರು.


ಸಭೆಯಲ್ಲಿ ಪಂಚಾಯತಿನ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ಹಾಗೂ ಶ್ಯಾಮ್ ಪ್ರಸಾದ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಉಪಾಧ್ಯಕ್ಷರು ಶ್ರೀಮತಿ ಗೌರಿ, ಸರ್ವ ಸದಸ್ಯರು ಮತ್ತು ಸಂಜೀವಿನಿ ಸಂಘದ ಸದಸ್ಯರು, ಸ್ತ್ರೀ ಶಕ್ತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ,ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. , ಗ್ರಾಮ ಪಂಚಾಯತ್ ಬೆಳ್ಳಾರೆಯ ಸಿಬ್ಬಂದಿಗಳು ಸಹಕರಿಸಿದರು .