ಕಾಣೆಯಾಗಿ 20 ದಿನ ಕಳೆದರೂ ಪತ್ತೆಯಾಗದ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ, ಗ್ರಾ.ಪಂ ಸದಸ್ಯರಿಂದ ಸುಬ್ರಹ್ಮಣ್ಯ ಠಾಣೆಗೆ ಭೇಟಿ, ಮನವಿ

0

ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಐನೆಕಿದು ಗ್ರಾಮದ ಭಾರತಿ ಮೂಕಮಲೆ ಕಾಣೆಯಾಗಿ ೨೦ ದಿವಸವಾಗಿದ್ದು ಇದುವರೆಗೆ ಪತ್ತೆಯಾಗಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ ಹಾಗೂ ಸದಸ್ಯರು ಸೇರಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಶೀಘ್ರ ಪತ್ತೆಗೆ ಮನವಿ ಮಾಡಿದ್ದಾರೆ.


ಈ ಸಂದರ್ಭ ಪತ್ತೆ ಕಾರ್ಯ ಪ್ರಗತಿಯ ಬಗ್ಗೆ ಠಾಣಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದು ಪತ್ತೆ ಹಚ್ಚುವ ಭರವಸೆ ನೀಡಿರುವುದಾಗಿ ವರದಿಯಾಗಿದೆ.