ಜೇಸಿಐ ವಲಯ ಉಪಾಧ್ಯಕ್ಷರಾಗಿ ಜೇಸಿ ದೇವರಾಜ್ ಕುದ್ಪಾಜೆ ಆಯ್ಕೆ

0

ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಪೂರ್ವಧ್ಯಕ್ಷರಾದ ಜೇಸಿ ದೇವರಾಜ್ ಕುದ್ಪಾಜೆ ಯವರು ಜೇಸಿಐ ಭಾರತದ ಪ್ರತಿಷ್ಠಿತ ವಲಯ 15ರ ವಲಯ ಉಪಾಧ್ಯಕ್ಷರಾಗಿ ಮುಂದಿನ ವರ್ಷಕ್ಕೆ ಆಯ್ಕೆಯಾಗಿದ್ದಾರೆ.

ಜೇಸಿಐ ಕಾರ್ಕಳ ರೂರಲ್ ಘಟಕದ ಆತಿಥ್ಯದಲ್ಲಿ ನ.4,5,6ರಂದು ನಡೆದ ದ.ಕ, ಉಡುಪಿ, ಉತ್ತರ ಕನ್ನಡ ಕಂದಾಯ ಜಿಲ್ಲೆಯನ್ನೊಳಗೊಂಡ ವಲಯ 15ರ ವಲಯ ಸಮ್ಮೇಳನದಲ್ಲಿ 2023ರ ಸಾಲಿನ ವಲಯ ಉಪಾಧ್ಯಕ್ಷ ಹುದ್ದೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ, ಜಯಭೇರಿಯಾಗಿ ವಲಯ ಉಪಾಧ್ಯಕ್ಷರಾಗಿ ಮುಂದಿನ ವರ್ಷಕ್ಕೆ ಆಯ್ಕೆಗೊಂಡಿರುತ್ತಾರೆ.

ಚುನಾವಣಾಧಿಕಾರಿಯಾಗಿ ವಲಯ 15ರ ನಿಕಟಪೂರ್ವ ಅಧ್ಯಕ್ಷ, ಜೇಸಿಐ ಭಾರತದ ರಾಷ್ಟ್ರೀಯ ಕಾನೂನು ಸಲಹೆಗಾರ ಜೇಸಿಐ ಸೆನೆಟರ್ ಸೌಜನ್ಯ ಹೆಗ್ಡೆಯವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಜೇಸಿಐ ಸುಳ್ಯ ಪಯಸ್ವಿನಿಯ 2020ರ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕೋವಿಡ್ ನಂತಹ ಸಂದರ್ಭದಲ್ಲಿ ಜನಪರ ಕಾರ್ಯಕ್ರಮದ ಮೂಲಕ ಜೇಸಿ ದೇವರಾಜ್ ಕುದ್ಪಾಜೆ ಯವರು ಜೇಸಿಐ ಸಪ್ತಾಹ ,ವ್ಯಕ್ತಿತ್ವ ವಿಕಸನ, ತರಬೇತಿ, ಸಮುದಾಯ ಸೇವೆಯಲ್ಲದೆ ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರನ್ನು ಘಟಕಕ್ಕೆ ಕರೆಯಿಸಿ ಗ್ರಾಮೀಣ ಭಾಗದಲ್ಲಿ ಶಾಶ್ವತ ಯೋಜನೆ ಗಳನ್ನು ಅನುಷ್ಟನಗೊಳಿಸಿರುತ್ತಾರೆ.

ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಸಹಕಾರದೊಂದಿಗೆ ಹಾಗೂ ಮಂಗಳೂರು ರೈಸ್ ಘಟಕದ ನಾಮನಿರ್ದೇಶನಗಳ ಮೂಲಕ ಈ ಹುದ್ದೆಗೆ ಸ್ಪರ್ಧಿಸಿದ್ದರು.

ಇವರು ಸುಳ್ಯ ಕಸಬಾ ದಿ. ಕುದ್ಪಾಜೆ ಕೃಷ್ಣಪ್ಪ ಗೌಡ ಮತ್ತು ಶ್ರೀಮತಿ ಸರಸ್ವತಿ ದಂಪತಿ ಯವರ ಪುತ್ರ. ಪತ್ನಿ ಶ್ರೀಮತಿ ಚೈತನ್ಯ ದೇವರಾಜ್ ಕುದ್ಪಾಜೆ ಮತ್ತು ಪುತ್ರಿ ಬೇಬಿ ಆರುಷಿ ಯವರನ್ನೊಳಗೊಂಡ ಸಂಸಾರ.