ನ.27 ಸುಳ್ಯದ ಮಂಡೆಕೋಲಿನಲ್ಲಿ ಒಳನಾಡು ಮೀನುಗಾರಿಕೆಗೆ ಅವಕಾಶಗಳ ಹಾಗು ಇಲಾಖಾ ಸವಲತ್ತುಗಳ ಮಾಹಿತಿ ಕಾರ್ಯಾಗಾರ

0

ನವಂಬರ್ 27ರಂದು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಕಾರದಲ್ಲಿ ಒಳನಾಡು ಮೀನುಗಾರಿಕೆಗೆ ಅವಕಾಶಗಳು ಹಾಗು ಇಲಾಖಾ ಸವಲತ್ತುಗಳ ಮಾಹಿತಿ ಕಾರ್ಯಾಗಾರ ಮಂಡೆಕೋಲು ಸಹಕಾರ ಸಂಘದ ಅಮೃತ ಸಭಾಭವನದಲ್ಲಿ ನಡೆಯಲಿದೆ ಎಂದು ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಮಹೇಶ್ ಕುಮಾರ್‌ ಮೇನಾಲ ತಿಳಿಸಿದ್ದಾರೆ.
ನವಂಬರ್ 21ರಂದು ಸುಳ್ಯ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು ಈ ಕಾರ್ಯಗಾರವು ಮಹಶೀರ್ ಮತ್ಸ್ಯ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಸುಳ್ಯ ಮತ್ತು ಮೀನುಗಾರಿಕಾ ಇಲಾಖೆ ಮಂಗಳೂರು ಸಹಭಾಗಿತ್ವದಲ್ಲಿ ನಡೆಯಲಿದ್ದು, ಕಾರ್ಯಗಾರದ ಉದ್ಘಾಟನೆಯನ್ನು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರರವರು ನೆರವೇರಿಸಲಿದ್ದಾರೆ.
ಸುಳ್ಯ ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಮಹೇಶ್ ಕುಮಾರ್‌ ಮೇನಾಲ ಅಧ್ಯಕ್ಷತೆ ವಹಿಸಲಿದ್ದು,
ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ‌ ಅಧ್ಯಕ್ಷ ಎ.ವಿ.ತೀರ್ಥರಾಮ, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಪುತ್ತೂರ ಮುತ್ತು ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ‌ ಸಂಘದ ಅಧ್ಯಕ್ಷ ರಾಮಕೃಷ್ಣ ರೈ, ಮಂಗಳೂರು ಮೀನುಗಾರಿಕಾ ವಿದ್ಯಾಲಯದ ಡೀನ್ ಡಾ.ಶಿವಕುಮಾರ್ ಮಗದ, ಮೀನುಗಾರಿಕಾ ಉಪನಿರ್ದೇಶಕರಾದ ಡಾ.ಸುಶ್ಮಿತಾ ರಾವ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಟಿ.ಜೆ. ಹಾಗೂ ಇನ್ನೂ ಹಲವಾರು ಗಣ್ಯರುಗಳು ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಎಂ.ವಿಶ್ವನಾಥ ರೆಡ್ಡಿ, ಗೌತಮ್‌ ಭಾಗವಹಿಸಿ ಮೀನು ಸಾಕಣೆಯ ವಿಧಾನ, ಮೀನು ಮರಿಗಳ ಆಹಾರ ಮತ್ತಿತರ ಮಾಹಿತಿಗಳನ್ನು ನೀಡಲಿದ್ದಾರೆ.
ಮಹಶೀರ್ ಕಂಪೆನಿ ವತಿಯಿಂದ ಈಗಾಗಲೇ 60 ಸಾವಿರ ಮೀನು ಮರಿಗಳನ್ನು ಸುಳ್ಯದ ವಿವಿಧ ಕಡೆಗಳಲ್ಲಿ ವಿತರಿಸಲಾಗಿದ್ದು ಒಂದು ಲಕ್ಷ ಮೀನು ಮರಿಗಳ ಬೇಡಿಕೆಯನ್ನು ಬೆಳೆಗಾರರು ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಮ್ಮ ಕಂಪನಿ ವತಿಯಿಂದ ಒಟ್ಟು 2 ಲಕ್ಷ ಮೀನು‌ ಮರಿಗಳನ್ನು ಸಾಕಾಣಿಕೆ ಮಾಡಲು ನೀಡುವ ಯೋಜನೆಯನ್ನು ರೂಪಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮೀನು ಸಾಕಣೆಗೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸಲು ಕೂಡ ಸಹಾಯವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಹಾಗೂ ಕೆರೆಗಳ ಅಭಿವೃದ್ಧಿಗಾಗಿ ನೆರವು ನೀಡಲಾಗುತ್ತದೆ ಎಂದು ಹೇಳಿದರು.
ತಮ್ಮಲ್ಲಿ ಬೆಳೆಸಿರುವಂತಹ ಮೀನುಗಳನ್ನು ಉತ್ತಮ ದರದಲ್ಲಿ ಮಾರಾಟ ಮಾಡಲು ಸ್ಥಳೀಯವಾಗಿ ಮಾರುಕಟ್ಟೆಗಳನ್ನು ಒದಗಿಸಿ ಸಾರ್ವಜನಿಕರಿಗೆ ಎಲ್ಲಾ ರೀತಿಯ ಮೀನುಗಳು ಲಭಿಸುವ ವ್ಯವಸ್ಥೆಯನ್ನು ಸಿ ಕೊಡಲಾಗುತ್ತದೆ. ಇದರೊಂದಿಗೆ ನಿಷೇಧಿತ ಮೀನುಗಳ ಸಾಕಾಣಿಕೆಯ ಬಗ್ಗೆ ಎಚ್ಚರ ವಹಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಶೀರ್ ಮತ್ಸ್ಯ ರೈತ ಉತ್ಪಾದಕರ ಕಂಪೆನಿಯ ನಿರ್ದೇಶಕರಾದ ಸುಪ್ರೀತ್ ಮೋಂಟಡ್ಕ, ನವೀನ್ ಚಾತುಬಾಯಿ, ಪ್ರಶಾಂತ್ ಅಂಬೆಕಲ್ಲು, ವಿಜೇತ್ ಅಡ್ಯಡ್ಕ, ಕಾರ್ಯನಿರ್ವಹಣಾಧಿಕಾರಿ ಧನುಷ್ ಪೆರುಂಬಾರು ಉಪಸ್ಥಿತರಿದ್ದರು.